ಬಂಡೆ ಮಹಾಕಾಳಿ ಆಶೀರ್ವಾದ ಪಡೆದ ಡೆವಿಲ್ ನಾಯಕಿ
ಡೆವಿಲ್ ಸಿನಿಮಾ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಥಿಯೇಟರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಚಿತ್ರದ ಟ್ರೈಲರ್, ಟೀಸರ್ ಹಾಗೂ ಹಾಡುಗಳಿಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೀಗ ಇದೆ ಸಂದರ್ಭದಲ್ಲಿ ಡಿಸೆಂಬರ್ 5 ರ ಶುಕ್ರವಾರದಂದು ದರ್ಶನ್ ಅವರ ಡೆವಿಲ್ ಚಿತ್ರದ ಯಶಸ್ಸು ಹಾಗೂ ಅವರ ಕಷ್ಟಗಳೆಲ್ಲ ಮುಗಿದು ಆದಷ್ಟು ಬೇಗ ಆಚೆ ಬರಬೇಕು ಎನ್ನುವ ವಿಚಾರವಾಗಿ ವಿಜಯ ದುರ್ಗ ಹೋಮ ಹಾಗೂ ಅನ್ನದಾನವನ್ನು ಏರ್ಪಡಿಸಲಾಗಿತ್ತು.
ಚಿತ್ರದ ನಾಯಕಿ ರಚಿತಾ ರೈ ಅವರು ಈ ಕಾರ್ಯಕ್ರಮಕ್ಕೆ ಬಂದು ಪೂಜೆ ಮಾಡಿ, ಅನ್ನದಾನಕ್ಕೆ ಕೈ ಜೋಡಿಸಿದರು.