ತೆಲುಗು ಸಿನಿಮಾ ಇಂಡಸ್ಟ್ರಿ ವಿರುದ್ಧ ರೊಚ್ಚಿಗೆದ್ದ ‘ರಾಬರ್ಟ್’..!
ಇದೇ ಮಾರ್ಚ್ 11 ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್ ಆಗುವುದು ಪಕ್ಕಾ ಆಗಿತ್ತು. ಆದ್ರೆ ಈಗ ರಾಬರ್ಟ್ ಸಿನಿಮಾವನ್ನು ಟಾಲಿವುಡ್ ನಲ್ಲಿ ರಿಲೀಸ್ ಮಾಡುವುದಕ್ಕೆ ಅಲ್ಲಿನ ಸಿನಿಮಾ ಮಂದಿ ಬಿಡ್ತಾ ಇಲ್ವಂತೆ. ಈಗಾಗ್ಲೇ ಡಬ್ಬಿಂಗ್ ಸಿನ್ಮಾಕ್ಕೆ ಕರ್ನಾಟಕದಲ್ಲಿ ಅನುಮತಿ ಸಿಕ್ಕಿದ್ದು, ತೆಲುಗು ಸಿನಿಮಾಗಳು ರಿಲೀಸ್ ಆಗ್ತಿವೆ. ಜೊತೆಗೆ ಕನ್ನಡ ಸಿನಿಮಾಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲೇ ತೆಲುಗು ಸಿನಿಮಾಗಳು ಕರ್ನಾಟಕದ ಥಿಯೇಟರ್ ಆವರಿಸ್ತಾ ಇವೆ. ಆದರೆ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವಂತಹ, ರಾಬರ್ಟ್ ಸಿನ್ಮಾ ರಿಲೀಸ್ ಮಾಡುವುದಕ್ಕೆ ಟಾಲಿವುಡ್ ನ ಜನ ತಕರಾರು ಮಾಡ್ತಾ ಇದ್ದಾರೆ.

ತೆಲುಗು ಸಿನಿಮಾ ಮಂದಿಯೇ ಈ ವರ್ತನೆ ವಿರುದ್ಧ ರೊಚ್ಚಿಗೆದ್ದಿರುವ ಡಿಬಾಸ್, ನಾಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ಹೋಗ್ತಾ ಇದ್ದಾರೆ. ನಮ್ಮ ಸಿನಿಮಾ ಅಲ್ಲಿ ರಿಲೀಸ್ ಮಾಡೋಕೆ ಅವಕಾಶ ಇಲ್ಲ ಅಂದಮೇಲೆ.. ಅವರ ಸಿನಿಮಾನೂ ಇಲ್ಲಿ ರಿಲೀಸ್ ಆಗಬಾರದು ದೂರು ನೀಡಲು ಹೋಗ್ತಿದ್ದಾರೆ.