News

ಕಿಚ್ಚನಿಗೆ ಅಮ್ಮನಾದ ದರ್ಶನ್ ಹೀರೋಯಿನ್

ಕಿಚ್ಚನಿಗೆ ಅಮ್ಮನಾದ ದರ್ಶನ್ ಹೀರೋಯಿನ್
  • PublishedMay 12, 2021

ಅಭಿರಾಮಿ.. ಕೇರಳ ಮೂಲದ ಪ್ರತಿಭಾನ್ವಿತಾ ನಟಿ… ಮಲಯಾಳಂನಿಂದ ಶುರುವಾದ ಸಿನಿಜರ್ನಿ ನಂತರ ಚತುರ್ಭಾಷೆಯ ತನಕ ಹಬ್ಬಿತು.. ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಅಭಿರಾಮಿ ದೊಡ್ಡ ಹೆಸರು ಗಳಿಸಿದ್ರು… ಕ್ಲಾಸ್ ಪಾತ್ರಗಳಿಗೆ ಅಭಿರಾಮಿ ಹೇಳಿ ಮಾಡಿಸಿದ ನಟಿ.. ಯಾವುದೇ ಪಾತ್ರ ಕೊಟ್ರು ನೀರು ಕುಡಿದಂತೆ ನಟಿಸ್ತಿದ್ರು….

ಈ ಪ್ರತಿಭೆಯೇ ಅಭಿರಾಮಿಗೆ ಕನ್ನಡದಿಂದ ಆಫರ್ ಬರೋಕೆ ಕಾರಣ ಆಗಿತ್ತು… ಆ ಸಿನಿಮಾವೇ ಡಿ ಬಾಸ್ ದರ್ಶನ್ ನಟನೆಯ ಲಾಲಿಹಾಡು ಸಿನಿಮಾ..



ಲಾಲಿಹಾಡು… ದರ್ಶನ್ ನಟನೆಯ ದಿ ಬೆಸ್ಟ್ ಸಿನಿಮಾಗಳಲ್ಲೊಂದು. ಹಳ್ಳಿ ಹೈದನಾಗಿ.. ಗಾಯಕನಾಗಿ ದರ್ಶನ್ ಸಿಕ್ಕಾಪಟ್ಟೆ ಕಾಡ್ತಾರೆ. ಅಷ್ಟರ ಸಿನಿಮಾ ಕಾಡೋ ಮತ್ತೊಂದು ಪಾತ್ರವೆಂದ್ರೆ ಅದು ಅಭಿರಾಮಿ ಪಾತ್ರ.. ಹಾಡುಗಳಂತೂ ರಾತ್ರೋ ರಾತ್ರಿ ಸೂಪರ್ ಹಿಟ್ ಆಗಿ ಬಿಟ್ಟಿದ್ವು.. ‘ದಿನ ಬೆಳಗೋ ಆ ಸೂರ್ಯನಾ..’ ಹಾಗೂ ನನ್ನ ಹೃದಯ… ಹಾಡುಗಳನ್ನು ಇವತ್ತಿಗೂ ಮರೆಯೋಕೆ ಆಗಲ್ಲ.. ಜೊತೆಗೆ 2003 ರಲ್ಲಿ ಈ ಸಿನಿಮಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು..

ಇದಾದ ನಂತರ ಅಭಿರಾಮಿ ಉಪ್ಪಿ ನಟನೆಯ ರಕ್ತ ಕಣ್ಣೀರು, ಶಿವಣ್ಣ ನಟನೆಯ ಶ್ರೀರಾಮ್ ಸಿನಿಮಾಗಳಲ್ಲಿ ನಟಿಸಿದ್ರು.. ಇಂತಹ ದೊಡ್ಡ ಗ್ರಾಫ್ ಇದ್ರೂ ಅಭಿರಾಮಿ ಸಿನಿಮಾಗಳನ್ನು ಬಿಟ್ಟು 2004 ವಿದೇಶಕ್ಕೆ ಹಾರಿದ್ರು.. ಅದಾದ ನಂತರ 10 ವರ್ಷಗಳ ನಂತ್ರ ಇದೀಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ…. ವಿದೇಶದಿಂದ ವಾಪಸ್ ಬಂದ ನಂತರ ಚೌಕ ಮತ್ತು ದಶರಥ ಸಿನಿಮಾ ಗಳಲ್ಲಿ ಕಾಣಿಸಿಕೊಂಡಿದ್ರು.. ಇದೀಗ ಮತ್ತೊಂದು ಬಿಗ್ ಸ್ಟಾರ್ ಜೊತೆ ಬಿಗ್ ಬಜೆಟ್ ಚಿತ್ರದಲ್ಲಿ ಅಭಿರಾಮಿ ನಟಿಸ್ತಿದ್ದಾರೆ..


ಅಂದ್ಹಾಗೆ ಅಭಿರಾಮಿ ನಟಿಸ್ತಿರೋ ಆ ಸಿನಿಮಾವೇ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ 3.. ಕಿಚ್ಚನ ತಾಯಿಯಾಗಿ ಅಭಿರಾಮಿ ಸಿನಿಮಾದಲ್ಲಿ ನಟಿಸ್ತಿದ್ದಾರೆ.. ಅಭಿರಾಮಿಗೂ ಕೂಡ ಕೋಟಿಗೊಬ್ಬ 3 ಬಿಗ್ ಬ್ರೇಕ್ ನೀಡೋ ಸಿನಿಮಾವಾಗಿ ನಿಲ್ಲಿಸಿದೆ ಅನ್ನೋ ವಿಶ್ವಾಸವಿದೆ.. ಕೋಟಿಗೊಬ್ಬ 3 ರಿಲೀಸ್ಗೆ ರೆಡಿಯಾಗಿದ್ದು, ಕೊರೊನಾ ಭೀಕರತೆ ನಿಂತ ಮೇಲೆ ಸಿನಿನಾ ಬಿಡುಗಡೆ ಆಗಲಿದೆ..

Written By
Kannadapichhar

Leave a Reply

Your email address will not be published. Required fields are marked *