ನಟ ದರ್ಶನ್ ಮಾನಸಿಕ ಸ್ಥಿತಿ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಬಿಗ್ ಅಪ್ಡೆಟ್
Pallavi N Raj
ನಟ ದರ್ಶನ್ ಮಾನಸಿಕವಾಗಿ ಕುಗ್ಗಿದ್ದಾರೆ ಅನ್ನುವ ವದಂತಿಗಳಿಗೆ ವಿಜಯಲಕ್ಷ್ಮೀ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ದರ್ಶನ್ ಜೈಲಿನಲ್ಲಿ ತುಂಬಾ ಚೆನ್ನಾಗಿದ್ದಾರೆ ಮತ್ತು ಮಾನಸಿಕವಾಗಿ ಬಲಿಷ್ಠರಾಗಿದ್ದಾರೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ. ಅದಕ್ಕೆಲ್ಲಾ ಕಾರಣ ನೀವೇ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಧೈರ್ಯವನ್ನು ಕೂಡ ತುಂಬಿದ್ದಾರೆ.
ಹೌದು.. ಮಂಡ್ಯದಲ್ಲಿ ಟ್ರೇಲರ್ ಲಾಂಚ್ ಈವೆಂಟ್ ನಡೆದಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಮಗ ವಿನಿಶ್ ಮುಖ್ಯ ಅತಿಥಿಯಾಗಿ ಆಗಮಿಸಿದ್ರು ದರ್ಶನ್ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ಕೊಟ್ಟಿದ್ದಾರೆ. ನಮಗೆ ಪ್ರೀತಿ ತೋರಿಸಿದ ಹಾಗೇ ಧನ್ವೀರ್‌ಗೂ ಪ್ರೀತಿ ತೋರಿಸಿ. ಪೈರಸಿ ಸಪೋರ್ಟ್ ಮಾಡಬೇಡಿ, ಸಿನಿಮಾ ಥಿಯೇಟರಲ್ಲಿ ನೋಡಿ ಎಂಜಾಯ್ ಮಾಡಿ ಎಂದು ವಿಜಯಲಕ್ಷ್ಮೀ ಕೋರಿದರು
ಇನ್ನೂ.. ವಿಜಯಲಕ್ಷ್ಮೀ ಅವರು ಮಾತನಾಡುತ್ತಿದ್ದಾರೆ ಎಂದರೆ ಅವರು ದರ್ಶನ್ ಬಗ್ಗೆ ಮಾತನಾಡಲಿ ಎಂದು ನಿರೀಕ್ಷಿಸೋದು ಸಾಮಾನ್ಯ. ಹೀಗಾಗಿ, ವಿಜಯಲಕ್ಷ್ಮೀ ಅವರು ದರ್ಶನ್ ಬಗ್ಗೆ ಮಾತನಾಡಿದರು. ಡಿ ಬಾಸ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ತುಂಬಾ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆಲ್ಲಾ ನೀವೆ ಕಾರಣ ನೀವು ನಿಮ್ಮಿಂದ ಅವರು ಚೆನ್ನಾಗಿದ್ದಾರೆ ಎಂದು ಹೇಳಿದರು. ದರ್ಶನ್ ತುಂಬಾ ಸ್ಟ್ರಾಂಗ್ ಆಗಿದ್ದಾರೆ ಎಂಬ ವಿಷಯ ಅಭಿಮಾನಿಗಳಿಗೆ ಖುಷಿ ನೀಡಿದೆ
—-