new updates News news updates ಪಿಚ್ಚರ್ stories ಪಿಚ್ಚರ್ UPDATE

Max ಮಂಜುಗೊಂದ್ ನ್ಯಾಯ ಗಿಲ್ಲಿಗೊಂದ್ ನ್ಯಾಯಾನಾ..? ಏನ್ ಬಿಗ್ ಬಾಸ್..?

Max ಮಂಜುಗೊಂದ್ ನ್ಯಾಯ ಗಿಲ್ಲಿಗೊಂದ್ ನ್ಯಾಯಾನಾ..? ಏನ್ ಬಿಗ್ ಬಾಸ್..?
  • PublishedDecember 8, 2025

By Pallavi N Raj
ಸದ್ಯಕ್ಕೆ ಗಿಲ್ಲಿನಟ ಬಿಗ್ ಮನೆಯಲ್ಲಿದ್ದಾರೆ.. ಆಚೆ ಅವರ ಅಭಿಮಾನಿಗಳು ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದಾರೆ, ಡೆವಿಲ್ ಸಿನಿಮಾದಲ್ಲಿಯೂ ಕೂಡ ಗಿಲ್ಲಿನಟ ಒಳ್ಳೆಯ ಪಾತ್ರದಲ್ಲಿ ಮಾಸ್ ಡೈಲಾಗ್ನಿಂದ ಮಿಂಚಿದ್ದಾರೆ.
ಆದ್ರೆ ಗಿಲ್ಲಿ ಅಭಿಮಾನಿಗಳು ಬೇಸರವಾಗೋ ವಿಚಾರ ಬಿಗ್ ಬಾಸ್ ನಲ್ಲಿ ನಡೆದಿದೆಯಂತೆ..

ಹೌದು.. ಡೆವಿಲ್ ಟ್ರೈಲರ್ ಬಂದಿದ್ದೇ ಬಂದಿದ್ದು, ಗಿಲ್ಲಿ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.. ಅದೇನು ಟ್ರೋಲು, ಅದೇನು ಕಂಟೆಂಟು ಒಟ್ನಲ್ಲಿ ಗಿಲ್ಲಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.. ಆದ್ರೆ ಬಿಗ್ ಬಾಸ್ ಯಾಕೆ ಗಿಲ್ಲಿಗೆ ಮೋಸ ಮಾಡಿದ್ರು ಅನ್ನೋ ಬೇಜಾರು ಗಿಲ್ಲಿ ಫ್ಯಾನ್ಸ್ ಗಿದೆ..


ಯೆಸ್.. ಗಿಲ್ಲಿ ಅಭಿಮಾನಿಗಳ ಹುಸಿ ಮುನಿಸಿಗೂ ಒಂದು ಕಾರಣವಿದೆ.. ಬಿಗ್ ಬಾಸ್ ಸೀಸನ್ 11 ಇದೇ ಡಿಸೆಂಬರ್ ವೇಳೆಗೆ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿತ್ತು, ಆ ಟೈಮ್ ನಲ್ಲಿ ಮಂಜು ಅಭಿನಯಿಸಿದ್ರು ಎಂಬ ಮಾತ್ರಕ್ಕೆ ಟ್ರೈಲರ್ ಹಾಕಿದ್ರು ಬಟ್ ದಾಸನ ಡೆವಿಲ್ ನಲ್ಲಿ ಈ ಸೀಸನ್ ನ ಗಿಲ್ಲಿ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸಿದ್ದಾರೆ ಆದ್ರು ಯಾಕೆ ಪ್ಲೇ ಮಾಡ್ಲಿಲ್ಲ..? ಮಂಜುಗೆ ಒಂದು ನ್ಯಾಯ ಗಿಲ್ಲಿಗೆ ಒಂದು ನ್ಯಾಯನ ಅಂತ ಗಿಲ್ಲಿ ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ..

ಅಂದಹಾಗೆ.. ಕಳೆದ ವರ್ಷ ಇದೇ ಸಮಯದಲ್ಲಿ ಕಿಚ್ಚನ ಮ್ಯಾಕ್ಸ್ ರೀಲಿಸ್ ಆಗಿತ್ತು ಆ ಸಮಯದಲ್ಲಿ ಬಿಗ್ ಬಾಸ್ ನಲ್ಲಿ ಗ್ರಾಂಡ್ ಸೆಲೆಬ್ರೇಷನ್ ಕೂಡ ಇತ್ತು! ಬಟ್ ಈಗ ಡೆವಿಲ್ ಟ್ರೈಲರ್ ರಿಲೀಸ್ ಆದ್ರು ಯಾಕೆ ತೋರಿಸಲಿಲ್ಲ ಅವರಿಗೂ ನೋಡೋ ಆಸೆ ಇರಲ್ವಾ ಯಾಕೆ ಭೇದ ಭಾವ ಮಾಡ್ತೀರಾ ಅಂತಿದ್ದಾರೆ ಗಿಲ್ಲಿ ಫ್ಯಾನ್ಸ್..

ಇನ್ನು.. ಬಿಗ್ ಬಾಸ್ ಮಾಡಿದ ಈ ಧೋರಣೆಯನ್ನು ನಾವು ಒಪ್ಪೊದಿಲ್ಲ.. ಕಿಚ್ಚನ ಸಿನಿಮಾಗಳು ಬಂದ್ರೆ ಮಾತ್ರ ಪ್ರಿಫರೆನ್ಸ್ ಕೊಡ್ತೀರಾ ದರ್ಶನ್ ಸಿನಿಮಾಗಳಿಗೇಕೆ ಹೀಗೆ ಮಾಡ್ತೀರಾ ಪ್ರತಿದಿನ ಬರೋ ಹಾಡಲ್ಲೂ ದಚ್ಚು ಸಾಂಗ್ ಹಾಕೋಲ್ಲ ಇದಕ್ಕೆ ಉತ್ತರ ಇಲ್ವಾ ಅಂತ ಕಿಡಿಕಾರ್ತಿದ್ದಾರೆ..

ಒಟ್ನಲ್ಲಿ.. ಕಳೆದ ವಾರ ಕಿಚ್ಚನ ಪಂಚಾಯ್ತಿಯಲ್ಲಿ ಕಿಚ್ಚ ಡೆವಿಲ್ ಗೆ ವಿಶ್ ಮಾಡ್ತಾರೆ ಅಂತ ಎಲ್ರು ಕಾದು ಕುಳಿತಿದ್ರು ಬಟ್ ಮಾಡ್ಲಿಲ್ಲ, ಅಟ್ ಲೀಸ್ಟ್ ಗಿಲ್ಲಿಗೆ ಟ್ರೈಲರ್ ತೋರಿಸ್ತಾರೆ ಅಂತ ವೇಟ್ ಮಾಡ್ತಿದ್ರು ಅದು ಆಗ್ದೇ ಇರೋ ಕಾರಣ ಬಿಗ್ ಬಾಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಾ ಇದ್ದಾರೆ ಗಿಲ್ಲಿ ಫ್ಯಾನ್ಸ್..

Written By
Kannada Picchar

Leave a Reply

Your email address will not be published. Required fields are marked *