ದಚ್ಚುಗೂ ಆ ಥೀಯೆಟರ್ ಗೂ ಇದೆ ಅವಿನಾಭಾವ ಸಂಬಂಧ ಇಲ್ಲಿ ಕ್ಲಿಕ್ ಆದ್ರೆ ಪಕ್ಕಾ ಹಿಟ್!
By Pallavi N Raj
ಸಾಲು ಸಾಲು ಸಿನಿಮಾಗಳು ತೆರೆಗೆ ಬರ್ತಿರೋ ಈ ಟೈಮ್ ನಲ್ಲಿ ಡೆವಿಲ್ ಚಿತ್ರಕ್ಕೆ ದರ್ಶನ್ ಲಕ್ಕಿ ಥಿಯೇಟರ್ ಸಿಕ್ಕಿದೆ, ಆ ಚಿತ್ರಮಂದಿರದಲ್ಲಿ ದಾಸನ ಸಿನಿಮಾಗಳು ಮಾಡಿರೋ ದಾಖಲೆಯೇನು ಒಂದೆರಡಲ್ಲ..
ಯೆಸ್.. ದರ್ಶನ್ ದಿ ಡೆವಿಲ್ ಅಬ್ಬರಕ್ಕೆ ಚಿತ್ರಮಂದಿರಗಳೆಲ್ಲ ಮದುವಣಗಿತ್ತಿಯಂತೆ ಸಿಂಗಾರ ಗೊಳ್ತಿವೆ. ಸಾಲು ಸಾಲು ಸಿನಿಮಗಳು ತೆರೆಗೆ ಬರ್ತಿರೋ ಈ ಡಿಸೆಂಬರ್ ತಿಂಗಳಲ್ಲಿ ಡೆವಿಲ್ ಸಿನಿಮಾಗಾಗಿಯೇ ದರ್ಶನ್ ಲಕ್ಕಿ ಥಿಯೇಟರ್ ಸಿಕ್ಕಿದೆ, ಆ ಚಿತ್ರಮಂದಿರದಲ್ಲಿ ದಾಸನ ಸಿನಿಮಾಗಳು ಮಾಡಿರೋ ದಾಖಲೆಯೇನು ಕಡಿಮೆಯಿಲ್ಲ.
ಹೌದು.. ಡೆವಿಲ್ ಅಬ್ಬರಿಸಿ ಬೊಬ್ಬಿರಿಯೋಕೆ ಇನ್ನು ಜಸ್ಟ್ 7 ದಿನ ಅಷ್ಚೆ ಬಾಕಿಯಿರೋದು.. ಥಿಯೇಟರ್ ನಲ್ಲಿ ಕಾಟೇರ ನಂತರ ದರ್ಶನ್ ರನ್ನ ಮಾಸ್ ಅಂಡ್ ಕ್ಲಾಸ್ ಅವತಾರವನ್ನ ಕಣ್ತುಂಬಿಕೊಳ್ಳೋಕೆ ಸೆಲೆಬ್ರೆಟಿಗಳು ತುದಿಗಾಲಲ್ಲಿ ಕಾಯ್ತಾ ಇದ್ದಾರೆ.. ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದೆ ಡೆವಿಲ್ ಚಿತ್ರತಂಡ ಅದುವೇ ಗಾಂದಿನಗರದ ನರ್ತಕಿಯಲ್ಲಿ ಡೆವಿಲ್ ನರ್ತನ ಮಾಡೋದು ಫಿಕ್ಸ್ ಆಗಿದೆ..
ಅಂದಹಾಗೆ.. ಡಿಸೆಂಬರ್ ಅಂದ್ರೆ ಸಿನಿಮಾ ಪ್ರೇಕ್ಷಕರಿಗೆ ಹಬ್ಬದೂಟ ಉಣಬಡಿಸುವ ತಿಂಗಳು ವರ್ಷವಿಡಿ ಎಷ್ಟೋ ಪ್ರೇಕ್ಷಕರು ಕಾದು ಕುಳಿತಿರ್ತಾರೆ ಅಂತದ್ದರಲ್ಲಿ ಒಟ್ಟೋಟ್ಟಿಗೆ ಸಿನಿಮಾಗಳು ಗ್ರಾಂಡ್ ಎಂಟ್ರಿ ಪಡ್ಕೊಂಡ್ರೆ ಬಿಟ್ಬಿಡ್ತೀವಾ ಚಾನ್ಸೇ ಇಲ್ಲ ಅಂತಿದ್ದಾರೆ.. ಡಿ. 11ಕ್ಕೆ ಡೆವಿಲ್, ಡಿ. 25ಕ್ಕೆ ಮಾರ್ಕ್, 45, ಬಹುಷ ಕೆಡಿ ಹೀಗೆ ಸಾಲು ಸಾಲು ಬಿಗ್ ಬಜೆಟ್ ಹಾಗೂ ದೊಡ್ಡ ನಟರ ಸಿನಿಮಾಗಳು ಬರ್ತಾಯಿದೆ..
ಅದ್ರಲ್ಲೂ ಥಿಯೇಟರ್ ಸಿಗೋದೆ ಇಲ್ಲಪ್ಪ ಅನ್ನೊ ಈ ಕಾಲದಲ್ಲಿ ದಚ್ಚುಗೆ ಫೇವರೇಟ್ ಥಿಯೇಟರ್ ಸಿಕ್ಕಿರೋದು ಅದೃಷ್ಟವೇ ನರ್ತಕಿ ಥಿಯೇಟರ್ ಗು ದಾಸನ ಸಿನಿಮಾಗು ಅವಿನಾಭಾವ ಸಂಭಂದವಿದೆ.. ದರ್ಶನ್ ಸಿನಿಮಾ ಅಂದ್ರೆ ನರ್ತಕಿ ಚಿತ್ರಮಂದಿರ ಫಿಕ್ಸ್ ಅನ್ನೋ ಮಾತು ಕೂಡ ಇದೆ.. ಯಾಕಂದ್ರೆ ದರ್ಶನ್ ನಟನೆಯ ಅದೆಷ್ಠೋ ಸಿನಿಮಾಗಳು ಇದೇ ಥಿಯೇಟರ್ನಲ್ಲಿ ಬಿಡುಗಡೆ ಆಗಿ ಬಾಕ್ಸಾಫೀಸ್ ನಲ್ಲಿ ಭರ್ಜರಿಯಾಗಿ ಸದ್ದು ಮಾಡಿರೋದು..
ಇನ್ನು.. ಡೆವಿಲ್ ಬರೋದಕ್ಕು ಮುನ್ನ ನರ್ತಕಿಯಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬ್ಲಾಕ್ಬಸ್ಟರ್ ಹಿಟ್ ಕೊಟ್ಟ ದಾಸನ ಸಿನಿಮಾಗಳು ಯಾವುವು ಅಂದರೆ ಕರಿಯ, ಪ್ರೇಮ್ ದರ್ಶನ್ ಕಾಂಬೀನೇಷನ್ ನ ಸಿನಿಮಾ ಮೊದಲ ಬಾರಿಗೆ ನರ್ತಕಿ ಥಿಯೇಟರ್ ನಲ್ಲಿ ಬಿಡುಗಡೆ ಆಯ್ತು , ಇಲ್ಲಿಂದ ಇವರಿಬ್ಬರ ಅದೃಷ್ಟವೇ ಬದಲಾಗಿ ದಚ್ಚು ಸಿನಿಮಾ ಬಂದ್ರೆ ನರ್ತಕಿ ಥಿಯೇಟರ್ ಅನ್ನೋದು ಫಿಕ್ಸ್ ಆಯ್ತು
ಒಟ್ನಲ್ಲಿ.. ಡೆವಿಲ್ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ ಜೊತೆಗೆ ದಚ್ಚು ಫೇವರೆಟ್ ಥಿಯೇಟರ್ ಕೂಡ ಸಿಕ್ಕಿದೆ.. ಇನ್ನೆನ್ನಿದ್ರು ದಿ ಡೆವಿಲ್ ಆರ್ಭಟ ಮಾತ್ರ ಬಾಕಿ ಇರೋದು..