ಡೆವಿಲ್ ನೋಡಿದ ದರ್ಶನ್ ತಾಯಿ
ಕನ್ನಡ ಸಿನಿಮಾರಂಗದಲ್ಲಿ ಈ ಬಾರಿ ನಟ ಪ್ರಚಾರ ಮಾಡದೆ ಸುದ್ದಿಯಲ್ಲಿ ಇದ್ದ ಸಿನಿಮಾ ಎಂದರೆ ‘ಡೆವಿಲ್‘. ನಟನ ಅನುಪಸ್ಥಿತಿಯಲ್ಲಿ ಅಭಿಮಾನಿಗಳೇ ನಿಂತು ಪ್ರಚಾರ ಮಾಡಿದ ಚಿತ್ರವಿದು.
ಡೆವಿಲ್ ಡಿಸೆಂಬರ್ 11ರಂದು ಬಿಡುಗಡೆಯಾಗಿ ಇಲ್ಲಿಗೆ ಎರಡನೇ ವಾರದ ಪ್ರದರ್ಶನ ಕಾಣುತ್ತಿದೆ.ಈಗಾಗಲೇ ದರ್ಶನ್ ಧರ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ ಸಿನಿಮಾವನ್ನು ಫರ್ಸ್ಟ್ ಡೇ ಫರ್ಸ್ಟ್ ಶೋ ಅಲ್ಲಿ ನೋಡಿದ್ದಾರೆ. ಈಗ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಸಿನಿಮಾವನ್ನು ವೀಕ್ಷಿಸಿದ್ದಾರೆ.
ಮಿಲನ ಸಿನಿಮಾದ ನಿರ್ದೇಶಕ ಪ್ರಕಾಶ್ ವೀರ್ ಸಾರಥ್ಯ ದಲ್ಲಿ ಜೈ ಮಾತಾ ಕಂಬೈನ್ಸ್ ನಿರ್ಮಾಣದಲ್ಲಿ ಬಂದಿರುವ ಸಿನಿಮಾ ಇದಾಗಿದ್ದು ದರ್ಶನ್ ಅವರ ಎರಡು ಶೇಡ್ ಗಳನ್ನು ಅಭಿಮಾನಿಗಳು ಇಷ್ಟ ಪಟ್ಟಿದ್ದಾರೆ.