‘ಕಳೆದ ವಾರ ರಿಲೀಸ್ ಆಗಿ ಜನರಿಂದ ಸಖತ್ ರೆಸ್ಪಾನ್ಸ್ ಪಡೀತಾ ಇರೋ ‘ಆಕ್ಟ್-1978’ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೆನ್ನು ತಟ್ಟಿದ್ದಾರೆ. ಕರೋನಾ ಸಂಕಷ್ಟದಿಂದ ಹೊರಬರಲು ಇಂಡಸ್ಟ್ರಿ ಹರಸಾಹಸ ಪಡುತ್ತಿರುವಾಗ ‘ಆಕ್ಟ್-1978’ ಚಿತ್ರತಂಡ ಮಾಡಿರೋ ಸಾಹಸಕ್ಕೆ ಬೆಂಬಲವಾಗಿ, ಚಿತ್ರತಂಡದ ಧೈರ್ಯಕ್ಕೆ ಶಹಬಾಸ್ ಅಂದಿದ್ದಾರೆ.
ಸಿನೆಮಾ ಕುರಿತು ಉತ್ತಮವಾಗಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಅಭಿಪ್ರಾಯಗಳು ಹಾಗೂ ಮಾಧ್ಯಮ ಮಿತ್ರರ ವಿಮರ್ಶೆಗಳನ್ನು ಕೇಳಿ ಸಂತೋಷಗೊಂಡ ದರ್ಶನ್ , ಆಕ್ಟ್-1978 ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಉಪಚರಿಸಿ, ತಂಡದ ಜೊತೆಗೆ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿದ್ದಾರೆ. ಚಿತ್ರದ ನಾಯಕ ಸಂಚಾರು ವಿಜಯ್, ನಿರ್ದೇಶಕ ಮಂಸೋರೆ, ಕ್ಯಾಮರಾ ಮನ್ ಸತ್ಯ ಹೆಗ್ಡೆ ಸೇರಿದಂತೆ ಸಿನಿಮಾ ತಂಡದ ಸದಸ್ಯರು ದರ್ಶನ್ ರನ್ನ ಭೇಟಿ ಮಾಡಿ, ಬೆಂಬಲವಾಗಿ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದ್ರು.