ಪಿಚ್ಚರ್ UPDATE

ಬುಲೆಟ್” ಏರಿ ಬರುತ್ತಿದ್ದಾರೆ ಧರ್ಮ ಕೀರ್ತಿರಾಜ್.

ಬುಲೆಟ್” ಏರಿ ಬರುತ್ತಿದ್ದಾರೆ ಧರ್ಮ ಕೀರ್ತಿರಾಜ್.
  • PublishedDecember 21, 2022

ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರುವ “ಬುಲೆಟ್” ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ತುಮಕೂರು ಹಾಗೂ ಗೋವಾದಲ್ಲಿ ಚಿತ್ರೀಕರಣ ನಡೆದಿದೆ. ಎರಡನೇ ಹಂತದ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಹೆಚ್ ಎಸ್ ಆರ್ ಲೇಔಟ್ ನ ಬಂಗಲೆಯೊಂದರಲ್ಲಿ ಹಿರಿಯ ನಟಿ ಭವ್ಯ, ನಟ ಧರ್ಮ ಕೀರ್ತಿರಾಜ್ ಹಾಗೂ ಬೇಬಿ ಸಿದ್ ಟೈನ್ ಅಭಿನಯಿಸುತ್ತಿರುವ ಹಾಡೊಂದರ ಚಿತ್ರೀಕರಣ ನಡೆಯುತ್ತಿದೆ.

ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಸತ್ಯಜಿತ್‌, “ಬುಲೆಟ್” ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕನ ತಂದೆಯ ಪಾತ್ರದಲ್ಲೂ ಸತ್ಯಜಿತ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಅವರಿಗೆ ಮೊದಲ ಚಿತ್ರ. ಇಸಾಕ್ ಕಾಜಿ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಧರ್ಮ ಕೀರ್ತಿರಾಜ್ ಅವರಿಗೆ ನಾಯಕಿಯಾಗಿ ಶ್ರೀಯಾ ಶುಕ್ಲ ಅಭಿನಯಿಸುತ್ತಿದ್ದಾರೆ. ಅಜಿತಾ ಜಾ ದ್ವಿತೀಯ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಭವ್ಯ ಸಹ ಮುಖ್ಯಪಾತ್ರದಲ್ಲಿದ್ದಾರೆ. ಬಾಲಿವುಡ್ ನ ಖ್ಯಾತ ನಟರಾದ ಅಮಿತಾಬ್ ಬಚ್ಚನ್, ಶಾರುಕ್ ಖಾನ್, ಅಮೀರ್ ಖಾನ್ ಮುಂತಾದವರ ಚಿತ್ರಗಳಲ್ಲಿ ನಟಿಸಿರುವ ಶಿವ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಅಧಿಕಾರಿ ಪಾತ್ರ ನಿರ್ವಹಿಸಿದ್ದಾರೆ…ಇಸಾಕ್ ಕಾಜಿ, ಸತ್ಯಜಿತ್, ಬೇಬಿ ಸಿದ್ ಟೈನ್, ಶಿವ, ರಾಜ ದೀಪ್, ಕಿಲ್ಲರ್ ವೆಂಕಟೇಶ್, ಶೋಭ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣವಿದೆ. ಮೂರು ಹಾಡುಗಳಿದ್ದು ರಾಜ್ ಭಾಸ್ಕರ್ ಸಂಗೀತ ನೀಡಿದ್ದಾರೆ. ಗುರುಪ್ರಸಾದ್ ಸಂಕಲನ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. “ಬುಲೆಟ್” ಚಿತ್ರದ ಚಿತ್ರೀಕರಣ ಗೋವಾದ ಬೀಚ್ ವೊಂದರಲ್ಲಿ ನಡೆಯುತ್ತಿದ್ದಾಗ ನಾಯಕಿ ಶ್ರೀಯಾ ಶುಕ್ಲ ಅವರ ಕಾಲಿಗೆ ಪೆಟ್ಡು ಬಿತ್ತು. ನಂತರ ನೆರೆಯ ವೈದ್ಯರ ಸಹಕಾರದಿಂದ ಚಿಕಿತ್ಸೆ ನೀಡಲಾಯಿತು. ಬೇಗ ಗುಣಮುಖರಾದರು ಎಂಬ ವಿಷಯವನ್ನು ಸಹ ನಿರ್ದೇಶಕ ಇಸಾಕ್ ಕಾಜಿ ತಿಳಿಸಿದ್ದಾರೆ.

Written By
Kannadapichhar