KVN ಗೆ ಬಿಗ್ ಶಾಕ್ ! ಜನನಾಯಗನ್ ಬಿಡುಗಡೆಗೆ ತಡೆ.
ದಳಪತಿ ವಿಜಯ್ 69ನೇ ಸಿನಿಮಾ ಜನನಾಯಗನ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ, ಕನ್ನಡದ ಬಹುದೊಡ್ಡ ನಿರ್ಮಾಣ ಸಂಸ್ಥೆ kvn ಸಿನಿಮಾಗೆ ಬಂಡವಾಳ ಹೂಡಿದೆ.. 500 ಕೋಟಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣವಾಗಿರೋ ಸಿನಿಮಾ..
ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಸಿನಿಮಾ ಜನವರಿ 9ಕ್ಕೆ ಬಿಡುಗಡೆಯಾಗಬೇಕಿತ್ತು.. ಪೊಂಗಲ್ ಅಂದ್ರೆ ಸಂಕ್ರಾಂತಿಗೆ ಸಿನಿಮಾ ಬರುತ್ತೆ ಅಂತ ವಿಜಯ್ ಫ್ಯಾನ್ಸ್ ಕಾದು ಕುಳಿತಿದ್ರು ಸಂಕ್ರಾಂತಿಗೆ ಗಿಫ್ಟ್ ಕೊಡೊಕೆ ರೆಡಿಯಾಗಿದೆ ಅನ್ನೋ ಅಷ್ಟರಲ್ಲಿ ಸಿನಿಮಾ ರೀಲಿಸ್ ಆಗ್ತಿಲ್ಲ.. ಇಡೀ ದಕ್ಷಿಣ ಭಾರತ ವೇಟ್ ಮಾಡ್ತಿದ್ದ ಸಿನಿಮಾ 33 ವರ್ಷಗಳಿಂದ ಸಿನಿಮಾ ಪ್ರೇಮಿಯ ಅತ್ಯಂತ ನೆಚ್ಚಿನ ನಟನಾಗಿ ಬೆಳೆದ, ಒಳ್ಳೊಳ್ಳೆಯ ಸಿನಿಮಾ ಕೊಟ್ಟ ದಳಪತಿ ವಿಜಯ್ ಅವರು ತಮ್ಮ ವೃತ್ತಿ ಜೀವನದಲ್ಲಿಯೇ ವಿಶೇಷವಾದ ಪಾತ್ರವನ್ನು ಜನನಾಯಗನ್ ಸಿನಿಮಾದಲ್ಲಿ ಮಾಡಿದ್ದಾರೆ..
ಯೆಸ್.. ಇನ್ನೆನೂ ಸಿನಿಮಾ ಬಿಡುಗಡೆಗೆ ಸಿನಿಮಾ ತಂಡ ಸಿದ್ಧತೆ ಮಾಡ್ಕೊಂಡಿತ್ತು ಟ್ರೈಲರ್ ಕೂಡ 4 ಕೋಟಿಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ 9 ಕ್ಕೆ ರೀಲಿಸ್ ಆಗುತ್ತೆ ಅಂತ ಎಲ್ರು ಅಂದುಕೊಂಡಿದ್ರು .ಬಟ್ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಸೆನ್ಸಾರ್ ಮಂಡಳಿ ಹಾಗೆ ಸಿನಿಮಾ ತಂಡದ ನಡುವೆ ಗೊಂದಲ ಮುಂದುವರೆದಿದ್ದು, ಜನನಾಯಗನ್ ತಂಡ ಮೊದಲ ಬಾರಿ ಸೆನ್ಸಾರ್ಗೆ ಸಿನಿಮಾವನ್ನು ತೋರಿಸಿದ ಬಳಿಕ ಕೆಲವು ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಲಾಗಿತ್ತು. ಸೆನ್ಸಾರ್ ಮಂಡಳಿ ಸೂಚನೆ ಮೇರೆಗೆ ಬದಲಾವಣೆಗಳನ್ನು ಮಾಡಿ ಮರು ವೀಕ್ಷಣೆಗೆ ನೀಡಲಾಗಿತ್ತು. ಇಲ್ಲಿಂದ ಸೆನ್ಸಾರ್ ಮಂಡಳಿ ಹಾಗೂ ಜನ ನಾಯಗನ್ ತಂಡದ ನಡುವೆ ಗೊಂದಲಗಳು ಶುರುವಾಗಿತ್ತು. ಈ ಸಂಬಂಧ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲಿ ಸಿನಿಮಾ ಬಿಡುಗಡೆ ಮಾಡುವ ಬಗ್ಗೆ ತೀರ್ಪನ್ನು ಜನವರಿ 9 ಕ್ಕೆ ಮುಂದೂಡಲಾಗಿದೆ..
ಈ ಮೂಲಕ ದಳಪತಿ ವಿಜಯ್ ಕೊನೆಯ ಸಿನಿಮಾವನ್ನು ಥಿಯೇಟರ್ನಲ್ಲಿ ಸಂಭ್ರಮಿಸಬೇಕು ಎಂದು ಎದುರು ನೋಡುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸಿನಿಮಾ ಬಿಡುಗಡೆಯಾಗಬೇಕಿದ್ದ ದಿನವೇ ತೀರ್ಪು ಇರುವುದರಿಂದ ಅಂದು ರಿಲೀಸ್ ಆಗೋದು ಬಹುತೇಕ ಅನುಮಾನ ಎನ್ನಲಾಗ್ತಿದೆ.. ಸದ್ಯ ಜನ ನಾಯಗನ್ ರಿಲೀಸ್ ಬಗ್ಗೆ ಗೊಂದಲ ಮನೆ ಮಾಡಿದೆ..
ಇನ್ನೂ.. ಚೆನ್ನೈ ಹೈಕೋರ್ಟ್ನಲ್ಲಿ ಸೆನ್ಸಾರ್ ಮಂಡಳಿ ಪರ ವಕೀಲರು ನ್ಯಾಯಾಲಯದಲ್ಲಿ ಮಂಡಿಸಿದ ವಾದದಿಂದ ಜನ ನಾಯಗನ್ ರಿಲೀಸ್ ಇನ್ನಷ್ಟು ಜಟಿಲವಾಗಿದೆ. ಚೆನ್ನೈ ಹೈಕೋರ್ಟ್ ನ್ಯಾಯಾಧೀಶರಾದ ಪಿ.ಟಿ. ಆಶಾ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರ ಕೊಡಲು ಸೆನ್ಸಾರ್ ಮಂಡಳಿ ಸಮಯ ಕೇಳಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ತೀರ್ಪನ್ನು ಜನವರಿ 9ಕ್ಕೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಈ ವೇಳೆ ಐದು ಸದಸ್ಯರ ಹೊಸ ಪರಿಷ್ಕರಣಾ ಸಮಿತಿಯು ಸಿನಿಮಾವನ್ನು ವೀಕ್ಷಿಸಿ ಸೆನ್ಸಾರ್ ಪ್ರಮಾಣಪತ್ರ ನೀಡುವ ಕುರಿತು ನಿರ್ಧರಿಸಲಾಗುತ್ತೆ ಎನ್ನಲಾಗಿದೆ. ಇದರಿಂದ ದಳಪತಿ ವಿಜಯ್ ಅಭಿಮಾನಿಗಳು ಆತಂಕ ಮತ್ತಷ್ಟು ಹೆಚ್ಚಾಗಿದೆ. ಜನ ನಾಯಗನ್ ಸಿನಿಮಾದಲ್ಲಿನ ಕೆಲವು ದೃಶ್ಯಗಳ ಬಗ್ಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ. ಸೇನೆಯಲ್ಲಿ ಮಹಿಳೆಯರನ್ನು ಸೇರಿಸುವುದು. ಹಾಗೇ ಅವರನ್ನು ಹುಲಿಗಳಂತೆ ಬೆಳೆಸುವ ದೃಶ್ಯವಿದೆ. ವಿಜಯ್ ನಟನೆಯ ಈ ರಿಮೇಕ್ ಸಿನಿಮಾದಲ್ಲಿ ಸೇನೆಯ ಚಿಹ್ನೆಗಳನ್ನು ಯಾವುದೇ ಅನುಮತಿ ಇಲ್ಲದೆ ಬಳಸಿರೋದಕ್ಕೆ ಸೆನ್ಸಾರ್ ಮಂಡಳಿಯು ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಇದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ
ಒಟ್ನಲ್ಲಿ.. ರಾಜಕೀಯ ಪ್ರೇರಿತವಾಗಿ ಇದೆಲ್ಲ ನಡಿತಿದ್ಯಾ ಅನ್ನೋದು ಸಧ್ಯಕ್ಕಿರೋ ಪ್ರಶ್ನೆ ಆಗಿದೆ.. ಏಪ್ರಿಲ್ ನಲ್ಲಿ ತಮಿಳುನಾಡಲ್ಲಿ ಎಲೆಕ್ಷನ್ ಇರೋದ್ರಿಂದ ಇದೆಲ್ಲ ರಾಜಕೀಯ ಸಂಚು ಅನ್ತಿದ್ದಾರೆ ವಿಜಯ್ ಅಭಿಮಾನಿಗಳು..