News

ಫುಲ್‌ ನಾಚಿಕೆಯೊಂದಿಗೆ ಅಮೃತಾಗೆ ಪ್ರಪೋಸ್ ಮಾಡಿದ ಡಾಲಿ, ಹಾಗಾದ್ರೆ ಫಿಕ್ಸಾ..!?

ಫುಲ್‌ ನಾಚಿಕೆಯೊಂದಿಗೆ ಅಮೃತಾಗೆ ಪ್ರಪೋಸ್ ಮಾಡಿದ ಡಾಲಿ, ಹಾಗಾದ್ರೆ ಫಿಕ್ಸಾ..!?
  • PublishedJanuary 28, 2022

ಸಾಮಾನ್ಯವಾಗಿ ಸಿನೆಮಾ ಸ್ಟಾರ್ಗಳಿಗೆ ಇಂಡಸ್ಟ್ರಿಯಲ್ಲಿ ಸಕ್ಸಸ್ ಸಿಕ್ಕ ನಂತರ ಪ್ರತಿಯೊಬ್ಬರೂ ಕೇಳುವ ಪ್ರಶ್ನೆ ಮದುವೆ ಯಾವಾಗ ಅನ್ನೋದು… ಇನ್ನೂ ಹೀರೋ ಗಳಿಗಂತೂ ಗರ್ಲ್ ಫ್ರೆಂಡ್ಸ್ ಇರ್ತಾರೆ ಅನ್ನೋದನ್ನ ತಲಾಶ್ ಮಾಡೋದ್ರಲ್ಲಿ ಅವರ ಅಭಿಮಾನಿಗಳು ಬ್ಯುಸಿ ಆಗಿರ್ತಾರೆ‌‌‌…ಸದ್ಯ ಈಗ್ಯಾಕಪ್ಪಾ ಈ ಮಾತು ಅಂದ್ರೆ …ನಟ ಡಾಲಿ ಧನಂಜಯ್ ಇತ್ತೀಚೆಗಷ್ಟೇ ನಟಿಯೊಬ್ಬರಿಗೆ ನಾಚುತ್ತಲೇ ಪ್ರಪೋಸ್ ಮಾಡಿದ್ದಾರೆ..

ಹೌದು ನಟ ಧನಂಜಯ್ ಹಾಗೂ ಅವರ ಸ್ನೇಹಿತರು ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ …ವಸಿಷ್ಠ ,ನಾಗಭೂಷಣ್, ಪೂರ್ಣ ಧನಂಜಯ ಅವರಿಗೆ ಸಾಥ್ ನೀಡಿದ್ದು….ನಟಿ ಅಮೃತಾ ಅಯ್ಯರ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ …

ಇದೇ ಕಾರ್ಯಕ್ರಮದಲ್ಲಿ ನಟ ಧನಂಜಯ್ ಕೆಂಪು ಗುಲಾಬಿ ಹಿಡಿದು ಮಂಡಿಯೂರಿ ನಟಿ ಅಮೃತಾ ಅವರಿಗೆ ಪ್ರಪೋಸ್ ಮಾಡಿದ್ದಾರೆ… ಇನ್ನೂ ಅಮೃತಾ ಅಯ್ಯಂಗಾರ್ ಕೂಡ ಧನಂಜಯ ಮಾಡಿದ ಪ್ರಪೋಸ್ ಗೆ ಖುಷಿಯಿಂದಲೇ ಭಾವುಕರಾಗಿದ್ದಾರೆ ..

ಹಾಗಾದ್ರೆ ಡಾಲಿ ಮದುವೆ ಆಗೋದು ಫಿಕ್ಸ್ ಆಯ್ತಾ? ಅನ್ನೋ ಮಾತು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ… ಅಮೃತಾ ಹಾಗೂ ಧನಂಜಯ ಬಗ್ಗೆ ಈ ರೀತಿಯ ವಿಚಾರ ಹರಿದಾಡ್ತಾ ಇರೋದು ಹೊಸತೇನಲ್ಲ ….ಈ ಹಿಂದೆಯೂ ಧನಂಜಯ ಅಮೃತಾರನ್ನ ಮದುವೆ ಆಗ್ತಾರಂತೆ ಅನ್ನೋ ಗಾಸಿಪ್ ಕೇಳಿಬಂದಿತ್ತು… ಆದ್ರೆ ಸದ್ಯ ಈ ಕಾರ್ಯಕ್ರಮದ ವೀಡಿಯೊದಲ್ಲಿ ಇವರಿಬ್ಬರು ನಾಚಿ ನೀರಾಗುತ್ತಿರುವ ರೀತಿ ನೋಡ್ತಿದ್ರೆ ಇಬ್ಬರೂ ಮದುವೆ ಆಗಲು ಗ್ರೀನ್ ಸಿಗ್ನಲ್ ಕೊಟ್ಟುಕೊಂಡಿರುವ ರೀತಿ ಕಾಣುತ್ತಿದೆ…

ಇನ್ನು ಡಾಲಿ ಕೆಂಪು ಗುಲಾಬಿ ಹಿಡಿದು ಕವನದ ಮೂಲಕ ಅಮೃತ ಗೆ ಪ್ರಪೋಸ್ ಮಾಡಿದ್ರೆ… ಅಮೃತಾ ಬಡವ ರಾಸ್ಕಲ್ ಸಿನಿಮಾದ ಹಾಡನ್ನೇ ಹಾಡಿ ಧನಂಜಯ ಅವರನ್ನ ಮೆಚ್ಚಿಸಿದ್ದಾರೆ… ಒಟ್ಟಾರೆ ಈ ವೀಡಿಯೋ ನೋಡಿದವರೆಲ್ಲರೂ ಮುಂದಿನ ದಿನಗಳಲ್ಲಿ ಇವರಿಬ್ಬರು ಸಪ್ತಪದಿ ತುಳಿಯುವುದು ಪಕ್ಕಾ ಎನ್ನುತ್ತಿದ್ದಾರೆ

Written By
Kannadapichhar

Leave a Reply

Your email address will not be published. Required fields are marked *