News

“ಜಮಾಲಿ ಗುಡ್ಡ” ದಲ್ಲಿ ಡಾಲಿ ಧನಂಜಯ್ – ಅದಿತಿ ಪ್ರಭುದೇವ್

“ಜಮಾಲಿ ಗುಡ್ಡ” ದಲ್ಲಿ ಡಾಲಿ ಧನಂಜಯ್ – ಅದಿತಿ ಪ್ರಭುದೇವ್
  • PublishedNovember 24, 2021

ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ್ ಅಭಿನಯದ “ಒನ್ಸ್ ಅಪಾನ್ ಎ ಟೈಮ್ ಜಮಾಲಿ ಗುಡ್ಡ” ಚಿತ್ರದ ಟೈಟಲ್ ಲಾಂಚ್ ಮಾಡಲಾಗಿದೆ. ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು. ಜಮಾಲಿ ಗುಡ್ಡ ಒಂದು ಸಸ್ಪೆನ್ಸ್ ಸ್ಟೋರಿ ಎಂಬುದನ್ನ ಪೋಸ್ಟರ್ ರಿವೀಲ್ ಮಾಡಿದೆ.

ನಟ ಧನಂಜಯ್‌ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಧನಂಜಯ್‌ ಪಾತ್ರ ಹೇಗೆ ಇರಲಿದೆ ಎನ್ನುವ ಕುತೂಹಲ ಮನೆ ಮಾಡಿದೆ. ಯಾಕೆಂದರೆ ನಟ ಧನಂಜಯ್ ಈಗ ಅಭಿನಯಿಸುತ್ತಿರುವ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳೇ ಆಗಿವೆ. ಡಾಲಿಯಾ ಅಬ್ಬರಿಸಿದ ಬಳಿಕ ಧನಂಜಯ್ ಪ್ರತಿ ಸಿನಿಮಾದಲ್ಲೂ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರ ಪಾತ್ರದ ಮೇಲೆ ನಿರೀಕ್ಷೆ ಹುಟ್ಟಿದೆ.

ನಟ ಧನಂಜಯ್ ಅವರನ್ನು ಸಿನಿಮಾರಂಗದಲ್ಲಿ ನಟ ರಾಕ್ಷಸ ಎಂದೇ ಕರೆಯಲಾಗುತ್ತದೆ. ಆದರೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಭಯ ಆಗಿತ್ತಂತೆ. ಈ ಸಿನಿಮಾ ಹೇಗೆ ಮೂಡಿ ಬರುತ್ತದೋ ಎನ್ನುವ ಸಂದೇಹ ಧನಂಜಯ್‌ ಅವರಿಗೆ ಇತ್ತಂತೆ. ಈ ವಿಚಾರವನ್ನು ನಟ ಧನಂಜಯ್ ಸ್ವತಃ ತಾವೇ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಆದರೆ ಚಿತ್ರದ ನಿರ್ದೇಶಕ ಕುಶಾಲ್ ಅವರಿಗೆ ಈ ಪಾತ್ರಕ್ಕೆ ನಟ ಧನಂಜಯ್‌ ಅವರನ್ನು ಬಿಟ್ಟು ಮತ್ಯಾರು ಕಂಡಿಲ್ಲ. ಹಾಗಾಗಿ ಈ ಪಾತ್ರವನ್ನು ಅವರು ಮಾಡಿದರೇ ಮಾತ್ರ ಸೂಕ್ತ ಎಂದು ಧನಜಂಯ್‌ ಅವರನ್ನು ಪಾತ್ರಕ್ಕೆ ಒಪ್ಪಿಸಿದ್ದಾರೆ. ನಟ ಧನಂಜಯ್ ಕೂಡ ತಮ್ಮ ಪಾತ್ರದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.


ಈ ಹಿಂದೆ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಸಿನಿಮಾ ನಿರ್ದೇಶನ ಮಾಡಿ ಸೈ ಎನ್ನಿಸಿಕೊಂಡಿದ್ದ ಕುಶಾಲ್ ಗೌಡ ಅವರು ಜಮಾಲಿ ಗುಡ್ಡ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀ ಹರಿ ಅವರು ಚಿತ್ರಕ್ಕೆ ಹಣ ಹೂಡಿಕೆ ಮಾಡಿದ್ದಾರೆ. ಸಂಗೀತ ಸಂಯೋಜನೆ ಅರ್ಜುನ್ ಜನ್ಯ, ಚಿತ್ರಕ್ಕೆ ಟಗರು ಖ್ಯಾತಿಯ ಮಾಸ್ತಿ ಅವರು ಸಂಭಾಷಣೆ ಬರೆದಿದ್ದಾರೆ.

“ಜಮಾಲಿ ಗುಡ್ಡ” ಚಿತ್ರದಲ್ಲಿ ಧನಂಜಯ್, ಅದಿತಿ ಪ್ರಭುದೇವ್, ಭಾವನಾ, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ ಇನ್ನು ಮುಂತಾದ ಕಲಾವಿದರ ದಂಡು ಜಾಲಿ ಗುಡ್ಡ ಸಿನಿಮಾದಲ್ಲಿದೆ. ಈಗಾಗಲೇ ಚಿತ್ರ ತಂಡ ಎರಡು ತಿಂಗಳಿನಿಂದ ಚಿತ್ರದ ಶೂಟಿಂಗ್‌ ನಲ್ಲಿ ಬ್ಯುಸಿ ಆಗಿದೆ.


****

Written By
Kannadapichhar

Leave a Reply

Your email address will not be published. Required fields are marked *