ನನ್ನ ಇಂಡಸ್ಟ್ರಿಲಿ ತುಳಿಯೋಕೆ ನೋಡಿದ್ರು :ಜೈದ್ ಖಾನ್
ಜಮೀರ್ ಅವರ ಪುತ್ರ ಜೈದ್ ಖಾನ್ ಅವರ ʼಕಲ್ಟ್ʼ ಸಿನಿಮಾವು ಜನವರಿ 23 ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.ಈ ಸಿನಿಮಾದಲ್ಲಿ ರಚಿತಾ ರಾಮ್ ಹಾಗು ಮಲೈಕಾ ವಸುಪಾಲ್ ನಾಯಕಿಯರಾಗಿದ್ದು,ನಿನ್ನೆ ದಾವಣಗೆರೆಯಲ್ಲಿ ನಡೆದ ಕಲ್ಟ್ ಪ್ರೀ – ರಿಲೀಸ್ ಇವೆಂಟ್ನಲ್ಲಿ ಜೈದ್ ಖಾನ್ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.
ಜೈದ್ ಖಾನ್ ಅವರು “ನಾನು ಹೀರೋ ಆಗ್ಬೇಕು ಅಂತ ಕನ್ನಡ ಇಂಡಸ್ಟ್ರಿಗೆ ಕಾಲಿಟ್ಟಾಗ ನನ್ನ ತುಳಿಯೋಕೆ ನೋಡಿದ್ರು,ಇವ್ನು ಮೇಲೆ ಬರಬಾರದು ತುಳಿದು ಬಿಡೋಣ ಎಂದು ಅಂದು ಕೊಂಡಿದ್ದರು “ಎನ್ನುವ ಹೇಳಿಕೆಯನ್ನು ನೀಡಿದ್ದರು.ಈ ವಿಚಾರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.