ನಾವು ಸತ್ರೆ ಮಾತ್ರ ಅಪ್ಪು ಮರೆಯೋಕೆ ಸಾದ್ಯ ಕ್ರೇಜಿ ಸ್ಟಾರ್ ರವಿಚಂದ್ರನ್

ಮನುರಂಜನ್ ರವಿಚಂದ್ರನ್ ಅಭಿನಯದ ‘ಮುಗಿಲ್ಪೇಟೆ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗವಹಿಸಿ ಮಾತನಾಡುತ್ತಾ ನಮ್ಮೆಲ್ಲರಿಂದ ದೂರವಾಗಿರುವ ಪುನೀತ್ ರಾಜಕುಮಾರ್ ಅವರನ್ನು ನೆನೆದು ಭಾವುಕರಾದ್ರು.
ನಾನು ಸಿನಿಮಾ ಇಂಡಸ್ಟ್ರಿಗೆ ಬಂದು ಇಷ್ಟು ವರ್ಷದಲ್ಲಿ ಸಾಕಷ್ಟು ನೋವು ನಲಿವುಗಳನ್ನು ಕಂಡಿದ್ದೀನಿ, ಯಾವತ್ತು ನಾನು ವೀಕ್ ಅಂತ ಅನ್ನಿಸಿರಲಿಲ್ಲ, ನಾನು ಏನಾದ್ರ ವೀಕ್ ಅಂತ ಅನ್ಸಿದ್ರೆ ಕಳೆದ 25 ದಿನದ ಹಿಂದೆ, ನಾನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಬ್ಬಿಂಗ್ ಮಾಡ್ತಿದ್ದೆ, ಅಲ್ಲಿಂದ ವಿಕ್ರಂ ಹಾಸ್ಪಿಟಲ್ ಕ್ರಾಸ್ ಮಾಡ್ತೀನಿ, ಏನಿಲ್ಲಿ ಇಷ್ಟು ಜನ ಅಂತ ಅನ್ಕೋತ್ತಿದ್ದ ಹಾಗೆ ನನಗೆ ಕಾಲ್ ಬಂತು ಸರ್ ನಿಮ್ ಅಪ್ಪು ಗೆ ಹಾಸ್ಪಿಟಲ್ ಅಲ್ಲಿ ಅಡ್ಮಿಟ್ ಮಾಡಿದ್ದಾರೆ ಅಂತ ಹೇಳಿದ್ರು, ಇನ್ನೊಂದು ಕಡೆ ನನ್ ಹೆಂಡ್ತಿ ಫೋನ್ ಮಾಡಿ ತಾಯಿಗೆ ಹುಷಾರಿಲ್ಲಾ ಐಸಿಯೂ ಗೆ ಸೇರಿಸ್ಬೇಕು ಅಂತ ಹೇಳಿದ್ಲು, ನನಗೆ ಫುಲ್ ಟೆನ್ಶನ್ ಅಲ್ಲಿಗೊಗ್ಲ, ಇಲ್ಲಿಗೋಗ್ಲ ಅಂತ ನನ್ ಹೆಂಡ್ತಿಗೆ ಹೇಳಿ ನೀನು ಅಮ್ಮನ್ನ ನೋಡ್ಕೊ ಅಸ್ಟ್ರಲ್ಲಿ ನಾನು ಇಲ್ಲಿ ಹೋಗಿ ಬರ್ತೀನಿ ಅಂತ ಹೇಳಿ ಗಾಡಿ ಟರ್ನ್ ಮಾಡ್ಕೋಂಡು ಬರ್ತಿನಿ, ಡಾ ರಾಜಕುಮಾರ್ ಅವರ ಕುಟುಂಬ ಜೊತೆ ಯಾವಾಗ್ಲೂ ನಾವು ನಿಮ್ ಜೊತೆ ಇದ್ದೀವಿ ಧೈರ್ಯವಾಗಿರಿ ಅಂತ ಹೇಳ್ಕಂಡು ಭರವಸೆ ಕೊಡೋಕೆ ಹೋಗ್ತಿದ್ವಿ. ಆದ್ರೆ ಈ ಸಲ ನಾವು ಹೋಗೋದ್ರೊಳಗೆ ಎಲ್ಲಾ ಮುಗ್ದೋಗಿತ್ತು. ಒಂದು ಕ್ಷಣ ಮಂಕು ಕವಿದ ಹಾಗೆ ಆಯ್ತು.
ನಾನು ಫಸ್ಟ್ ಟೈಮ್ ವೀಕ್ ಅನ್ಸಿದ್ದು. ಆ ನೋವು ನಮ್ಮ ಮನಸಲ್ಲೆ ಇಟ್ಕೊಂಡು ಕೊರಗ್ತಿದ್ದೀವಿ, ಆ ನೋವು ನಮ್ಮಿಂದ ದೂರ ಆಗಲ್ಲಾ, ಅಪ್ಪುವಿನ ನಗುವನ್ನ ಮರೆಯೋಕೆ ನಮ್ಮಿಂದ ಆಗ್ತಿಲ್ಲಾ, ನಾನು ಎಲ್ಲೋದ್ರು ಒಂದು ಮಾತನ್ನ ಹೇಳ್ತಿದ್ದೆ, ಕಲಾವಿದರಿಗೆ ಸಾವಿಲ್ಲಾ ನಾವು ಮರೆತ್ರೆ ಮಾತ್ರ ಸಾಯ್ತೀವಿ, ಈಗ ಅದನ್ನ ಬದಲಾವಣೆ ಮಾಡ್ಕಂಡು ಹೇಳೋದಾದ್ರೆ ನಾವು ಸತ್ರೆ ಮಾತ್ರ ಅಪ್ಪುವನ್ನ ಮರೆಯೋದು. ಅಪ್ಪು ಯಾವತ್ತು ನಮ್ಮ ಹೃದಯದಲ್ಲಿ ಮಗುವಾಗಿ ನಗುವಾಗಿ ಇರ್ತಾರೆ ಎಂದರು.
****