ಕಿತ್ತಾಟ ಹೊಡೆದಾಟ ಹೋರಾಟ
ದರ್ಶನ್ – ರಮ್ಯಾ
ದರ್ಶನ್ ಹಾಗೂ ರಮ್ಯಾ ಕನ್ನಡ ಸಿನಿಮಾ ರಂಗ ಕಂಡ ಅದ್ಭುತ ಆನ್ ಸ್ಕ್ರೀನ್ ಪೇರ್. ಇಬ್ಬರು ಎಕ್ಸಲೆಂಟ್ ನಟರು ಹೌದು. ಆದರೆ ಈ ವರ್ಷ ರಮ್ಯಾ ಅವರು ದರ್ಶನ್ ಅವರ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಮಧ್ಯತರ ಜಾಮೀನನ್ನು ಪ್ರಶಿಸಿತು. ಇದಕ್ಕೆ ರಮ್ಯಾ ಅವರು ಬೆಂಬಲಿಸಿದರು. ಈ ಕಾರಣ ದರ್ಶನ್ ಅವರ ಕೆಲ ಅಭಿಮಾನಿಗಳು ಅವರಿಗೆ ಅಶ್ಲೀಲ ಸಂದೇಶಗಳು, ಅತ್ಯಾಚಾರ ಮತ್ತು ಜೀವ ಬೆದರಿಕೆಗಳನ್ನು ಹಾಕಲಾರಂಭಿಸಿದರು. ಹೀಗಾಗಿ ರಮ್ಯಾ ಅವರು ದರ್ಶನ್ ಅಭಿಮಾನಿಗಳಿಗೂ ಹಾಗೂ ರೇಣುಕಾ ಸ್ವಾಮಿಗೂ ಏನು ವ್ಯತ್ಯಾಸ ಎಂದು ಕೇಳಿದರು.ಅವರ ವಿರುದ್ಧ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಅಧಿಕೃತ ದೂರು ನೀಡಿದ್ದರು.ರಮ್ಯಾ ಅವರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ದರ್ಶನ್ ಅವರ ಕೆಲವು ಅಭಿಮಾನಿಗಳನ್ನು ಬಂಧಿಸಿದರು.
ಕಮಲ್ ಹಾಸನ್
ಕಮಲ್ ಹಾಸನ್ ಅವರ ಥಗ್ ಲೈಫ್ ಸಿನಿಮಾದ ಪ್ರಚಾರದ ವೇಳೆ ” ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ ” ಎಂದು ಹೇಳಿದ್ದರು.ಈ ಹೇಳಿಕೆಯು ಕನ್ನಡಿಗರನ್ನು ಕೆರಳುವಂತೆ ಮಾಡಿತು.ಕನ್ನಡ ಪರ ಸಂಘಟನೆ ಹಾಗೂ ಕರ್ನಾಟ ರಕ್ಷಣಾ ವೇದಿಕೆ ಇದರ ವಿರುದ್ಧ ಹೋರಾಟ ಮಾಡಿದರು. ಜೊತೆಗೆ ಕಮಲ್ ಹಾಸನ್ ಕ್ಷಮೆ ಕೇಳುವ ವರೆಗೆ ಅವರ ಥಗ್ ಲೈಫ್ ಸಿನಿಮಾ ಕರ್ನಾಟಕ ದಲ್ಲಿ ಬಿಡುಗಡೆ ಯಾಗುವುದಿಲ್ಲ ಎಂದ್ರು.ಕರ್ನಾಟಕ ಹೈಕೋರ್ಟ್ ಕೂಡ ಈ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿತು, ಪಬ್ಲಿಕ್ ಪರ್ಸನ್ ಆಗಿ ಇಂತಹ ವಿಷಯಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಲಿ ಮತ್ತು ಒಂದು ಸಣ್ಣ ಕ್ಷಮೆಯಾಚನೆಯು ವಿವಾದವನ್ನು ಬಗೆಹರಿಸಬಲ್ಲದು ಎಂದು ಸಲಹೆ ನೀಡಿತು. ಆದರೆ, ಕಮಲ್ ಹಾಸನ್ ಅವರು ತಮ್ಮ ಹೇಳಿಕೆಯನ್ನು “ಪ್ರೀತಿಯಿಂದ ಹೇಳಿದ್ದು ಮತ್ತು ಅದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ” ಎಂದು ಸ್ಪಷ್ಟನೆ ನೀಡಿದರಾದರೂ, ಬಹಿರಂಗವಾಗಿ ಕ್ಷಮೆ ಕೇಳಲು ನಿರಾಕರಿಸಿದರು. ಇದರಿಂದಾಗಿ ಚಿತ್ರದ ಬಿಡುಗಡೆಗೆ ತಡೆಯುಂಟಾಯಿತು.
ದ್ರುವ ಸರ್ಜಾ -ರಾಘವೇಂದ್ರ ಹೆಗ್ಡೆ
ನಟ ದ್ರುವ ಸರ್ಜಾ ಅವರಿಗೆ ಜಗ್ಗುದಾದ ಸಿನಿಮಾದ ನಿರ್ದೇಶಕ ರಾಘವೇಂದ್ರ ಹೆಗ್ಡೆ 2018-19 ರ ಅವಧಿಯಲ್ಲಿ 3 ಕೋಟಿಗು ಅಧಿಕ ಹಣವನ್ನು ಮುಂಚಿತವಾಗಿ ಕೊಟ್ಟಿದ್ದರು.ಒಂದು ಸೈನಿಕ ಕಥೆಯನ್ನು ಆಧರಿಸಿ ಸಿನಿಮಾ ಮಾಡಲು ಇಬ್ಬರ ನಡುವೆ ಒಪ್ಪಂದವಾಗಿತ್ತು ಆದರೆ ದ್ರುವ ಅವರು ಚಿತ್ರ ಮುಂದೂಡುತ್ತ ಬಂದರು, ಮತ್ತೆ ಕರೆಗೆ ಸ್ಪಂದಿಸದ ಕಾರಣ ದೂರು ನೀಡಿದ್ದರು. , ರಾಘವೇಂದ್ರ ಹೆಗ್ಡೆ ಅವರು ಸಿನಿಮಾವನ್ನು ತಮಿಳು ಅಥವಾ ತೆಲುಗಿನಲ್ಲಿ ಮೊದಲು ಮಾಡಲು ಬಯಸಿದ್ದರು. ಈ ಕೇಸ್ ಈಗ ಕೋರ್ಟ್ ನಲ್ಲಿ ಇದೆ.
ಹೇಮಂತ್
ರಿಚ್ಚಿ ಸಿನಿಮಾದ ನಿರ್ದೇಶಕ ಹೇಮಂತ್ ಸಿನಿಮಾದಲ್ಲಿ ನಾಯಕಿ ಪಾತ್ರ ಕೊಡುವುದಾಗಿ ನಂಬಿಸಿ, ಶೂಟಿಂಗ್ ವೇಳೆ ಅಸಭ್ಯವಾಗಿ ವರ್ತಿಸಿದ್ದಾರೆ, ಜೊತೆಗೆ ಮದ್ಯ ಕುಡಿಸಿ ನಟಿಯ ಪ್ರೈವೇಟ್ ವಿಡಿಯೋ ವನ್ನು ಚಿತ್ರೀಕರಣ ಮಾಡಿದ್ದಾರೆ. ಜೊತೆಗೆ ಅದನ್ನು ಬಳ್ಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವ ವಿಚಾರಕ್ಕೆ ಸಂತ್ರಸ್ತೆ ದೂರು ಸಲ್ಲಿಸಿದ್ದರು.ಹೇಮಂತ್ ಅವರನ್ನು ಈ ವಿಷಯವಾಗಿ ಬಂದಿಸಲಾಯಿತು
ಕಾಂತಾರ’ ಚಿತ್ರದ ದೈವದ ಅನುಕರಣೆ
ಗೋವಾದಲ್ಲಿ ನಡೆದ IFFI 2025 ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದ ದೈವದ ಅನುಕರಣೆಯನ್ನು ವೇದಿಕೆ ಮೇಲೆ ಅಸಭ್ಯವಾಗಿ ಅನುಕರಿಸಿದ್ದು ಜೊತೆಗೆ ದೈವವನ್ನು ‘ದೆವ್ವ’ (Ghost) ಎಂದು ಹೇಳಿದರು.ರಿಷಬ್ಕ ಶೆಟ್ಟಿ ಯವರು ತಡೆದರು ಮತ್ತೆ ಅದನ್ನೇ ಮಾಡಿದರು ಇದು ಕರಾವಳಿ ಜನರ ಆಕ್ರೋಶಕ್ಕೆ ಮಣಿದ ರಣವೀರ್ ಸಿಂಗ್ ನಂತರ ಬಹಿರಂಗ ಕ್ಷಮೆ ಕೇಳಿದರು.ತಾನು ಯಾವುದೇ ಭಾಗದ ಜನರ ನಂಬಿಕೆಗೆ ನೋವು ಉಂಟು ಮಾಡಿದ್ದಲ್ಲಿ ಕ್ಷಮಿಸಿ ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು.
ದುನಿಯಾ ವಿಜಯ್ SIMA
ಈ ಬಾರಿ ದುಬೈ ನಲ್ಲಿ ನಡೆದ SIMA ಅವಾರ್ಡ್ಸ್ ನಲ್ಲಿ ದುನಿಯಾ ವಿಜಯ್ ಅವರು ಕಾರ್ಯಕ್ರಮದ ಕೊನೆಯಲ್ಲಿ ಪ್ರೇಕ್ಷಕರೆಲ್ಲ ಹೋದ ಮೇಲೆ ಕನ್ನಡ ಕಲಾವಿದರಿಗೆ ಪ್ರಶಸ್ತಿ ಕೊಡುತ್ತೀರಾ ಎಂದು ಗುಡುಗಿದರು.ಕನ್ನಡದ ಕಲಾವಿದರ ಜೊತೆಗೆ ಆಗುತ್ತಿರುವ ತಾರತಮ್ಯದ ಬಗ್ಗೆ ಮಾತನಾಡಿದಕ್ಕೆ ಕನ್ನಡಿಗರು ವಿಜಯ್ ಅವರನ್ನು ಪ್ರಶಂಸಿದರು.
ದಚ್ಚು – ಕಿಚ್ಚ ಫ್ಯಾನ್ ವಾರ್
ಕನ್ನಡ ಚಿತ್ರರಂಗದ ಇಬ್ಬರು ದೊಡ್ಡ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವಿನ ಈ ‘ಫ್ಯಾನ್ ವಾರ್’ ದಶಕಗಳಿಂದಲೂ ಚರ್ಚೆಯಲ್ಲಿದೆ. ಒಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಈ ಇಬ್ಬರು ನಟರ ನಡುವೆ ಉಂಟಾದ ವೈಮನಸ್ಸು ಫ್ಯಾನ್ ವಾರ್ ಗೆ ಎಲ್ಲೋ ಒಂದು ಕಡೆ ಕಾರಣವಾಯಿತು ಹಲವಾರು ವರ್ಷಗಳಿಂದ ಇದ್ದ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ನಡುವೆ ಇದ್ದ ಫ್ಯಾನ್ ವಾರ್ ಈ ವರ್ಷ ತಾರಕಕ್ಕೆರಿತ್ತು. ಮುಖ್ಯವಾಗಿ ಡಿಸೆಂಬರ್ ನಲ್ಲಿ ಮಿತಿ ಮೀರಿತ್ತು.