ಪತ್ನಿಯ ಸೀಮಂತದ ದಿನ ನೇತ್ರದಾನ ಮಾಡಿದ “ಜಿ ಜಿ”
ಕಾಮಿಡಿ ಕಿಲಾಡಿ ಮೂಲಕ ಪ್ರೇಕ್ಷಕರ ಮನೆಮನೆಗೂ ತಲುಪಿದ ಕಲಾವಿದ ಗೋವಿಂದೇಗೌಡ ..ತಮ್ಮ ಜೊತೆ ಪ್ರತಿ ಸ್ಪರ್ಧಿಯಾಗಿದಂತಹ ದಿವ್ಯಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು…ಗೋವಿಂದೇಗೌಡ ಹಾಗೂ ದಿವ್ಯ ತಮ್ಮ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ …ಇತ್ತೀಚೆಗಷ್ಟೇ ಮೆಟರ್ನಿಟಿ ಫೋಟೊಶೂಟ್ ಮಾಡಿ ಸುದ್ದಿಯಲ್ಲಿದ್ದ ಈ ಜೋಡಿ ಈಗ ಸೀಮಂತದ ದಿನ ಮಹತ್ವದ ಕಾರ್ಯವನ್ನು ಮಾಡಿ ಎಲ್ಲರ ಗಮನ ಸೆಳೆಯುತ್ತಿದೆ …

ದಿವ್ಯಶ್ರೀ ಅವರ ಸೀಮಂತ ಕಾರ್ಯ ಇತ್ತೀಚಿಗಷ್ಟೇ ನಡೆದಿದ್ದು.. ಸೀಮಂತ ಕಾರ್ಯದಲ್ಲಿ ನಟ ಗೋವಿಂದೇಗೌಡ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ…

ಪುನೀತ್ ರಾಜ್ ಕುಮಾರ್ ನಿಧನದ ನಂತರ ಸಾಕಷ್ಟು ಸಾಕಷ್ಟು ಅಭಿಮಾನಿಗಳು ನೇತ್ರದಾನ ಮಾಡುವ ಮೂಲಕ ಪುನೀತ್ ಕನಸನ್ನ ನನಸು ಮಾಡಿದ್ದರು… ಈಗ ಅದೇ ಹಾದಿಯಲ್ಲಿ ಕಾಲಿಟ್ಟಿರುವ ಗೋವಿಂದೇಗೌಡ ಹಾಗೂ ದಿವ್ಯಶ್ರೀ ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಮಹತ್ವದ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ …
