new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ʼಲ್ಯಾಂಡ್‌ ಲಾರ್ಡ್‌‌ʼ ನೋಡ ಬಯಸಿದ ಸಿಎಂ ಸಿದ್ದರಾಮಯ್ಯ

ʼಲ್ಯಾಂಡ್‌ ಲಾರ್ಡ್‌‌ʼ ನೋಡ ಬಯಸಿದ ಸಿಎಂ ಸಿದ್ದರಾಮಯ್ಯ
  • PublishedJanuary 24, 2026

ಸಲಗ ವಿಜಯ್‌ ,ರಾಜ್‌ ಬಿ.ಶೆಟ್ಟಿ ,ರಚಿತಾ ರಾಮ್‌,ಉಮಾಶ್ರಿ,ರಿತನ್ಯಾ ವಿಜಯ್‌ ,ಶಿಶಿರ್‌ ಹೀಗೆ ಅನೇಕ ಕಲಾವಿದರು ನಟಿಸಿರುವ ಲ್ಯಾಂಡ್‌ ಲಾರ್ಡ್‌ ಸಿನಿಮಾ ನಿನ್ನೆ ರಾಜ್ಯದಾದ್ಯಂತ ಬಿಡುಗಡೆ ಕಂಡಿದೆ.ಈಗಾಗಲೇ ಕಥೆ,ನಟನೆ ಹಾಗು ಮೇಕಿಂಗ್‌ ಇಂದ ಜನರ ಮನ ಗೆಲ್ಲುತ್ತಿರುವ ಸಿನಿಮಾ ಇದಾಗಿದ್ದು,ಇದೀಗ ಸಿಎಂ ಸಿದ್ದರಾಮಯ್ಯ ಅವರು ಚಿತ್ರ ನೋಡಲು ಬಯಸಿದ್ದಾರೆ.

ʼಲ್ಯಾಂಡ್‌ ಲಾರ್ಡ್‌ʼ, ಇದು ಅಳಿದವರ ಕಥೆಯಲ್ಲ ,ಅಳಿದು ಉಳಿದವರ ಕಥೆ.ಜನವರಿ 18 ರಂದು ಸಿನಿಮಾ ತಂಡ ಟ್ರೈಲರ್‌ ಬಿಡುಗಡೆ ಮಾಡಿತ್ತು. ಆಗಿನಿಂದ ಈ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿತ್ತು.ನಿನ್ನೆ ಚಿತ್ರ ಬಿಡುಗಡೆಯಾದ ಮೇಲಂತ್ತೂ ಜನರು ಸಿನಿಮಾ ಅಂದರೆ ಹಿಂಗ್‌ ಇರ್ಬೇಕು ಅನ್ನೋ ರೇಂಜ್‌ ಗೆ ಮೋಡಿ ಮಾಡಿದೆ.ಈಗ ಸಲಗ ವಿಜಯ್ ಅವರು ಖುದ್ದಾಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.

ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆಯನ್ನು ನೋಡಿರುವ ಸಿದ್ದರಾಮಯ್ಯನವರು “ಲ್ಯಾಂಡ್‌ ಲಾರ್ಡ್‌ ಸಿನಿಮಾ ಇಂದಿನ ಸಮಾಜದಲ್ಲಿ ಅತ್ಯಂತ ಅವಶ್ಯಕ. ಇದನ್ನ ನಾನ್ ನೋಡೇ ನೋಡ್ತಿನಿ ಹಾಗೆ ಎಲ್ಲರೂ ನೋಡಲೇ ಬೇಕಾದ ಸಿನಿಮಾ” ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *