ಎಲ್ಲಾ ಸ್ಟಾರ್ ಸಿನಿಮಾಗಳಿಗೂ ಬೇಕು ಈ ಲಿಟಲ್ ಸ್ಟಾರ್ !

ಕನ್ನಡ ಚಿತ್ರರಂಗದಲ್ಲಿ ಪ್ರತಿ ವರ್ಷ ಏನಿಲ್ಲವೆಂದರೂ ಕನಿಷ್ಠ ನೂರರಿಂದ ನೂರೈವತ್ತು ಕನ್ನಡ ಸಿನಿಮಾಗಳು ಮುಹೂರ್ತ ಕಂಡು,ಅದರಲ್ಲಿ ಶೇಕಡಾ ಎಂಬತ್ತು ಭಾಗ ಬಿಡುಗಡೆ ಕಾಣುತ್ತವೆ.ಕೆಲವು ಚಿತ್ರಗಳಲ್ಲಿ ಸ್ಟಾರ್ ನಟ ನಟಿಯರು ಇದ್ದರೆ ಇನ್ನೂ ಕೆಲವು ಚಿತ್ರಗಳಲ್ಲಿ ಹೊಸಬರದ್ದೆ ದಂಡು ಇರುತ್ತದೆ.
ತಾರಾಗಣ ಹೇಗೆ ಇರಲಿ,ಎಲ್ಲ ಸಿನಿಮಾಗಳಲ್ಲೂ ಬಾಲ ಕಲಾವಿದರಂತು ಇದ್ದೆ ಇರುತ್ತಾರೆ..ಎಂಬತ್ತು ತೊಂಬತ್ತರ ಕಾಲ ಘಟ್ಟದಲ್ಲಿ ಬಾಲ ನಟರಾಗಿ ಪುನೀತ್ ರಾಜಕಮಾರ್,ಮಾಸ್ಟರ್ ಮಂಜುನಾಥ್,ಮಾಸ್ಟರ್ ಆನಂದ್,ಬೇಬಿ ಶ್ಯಾಮಿಲಿ,ಬೇಬಿ ಇಂದಿರಾ,ಮಾಸ್ಟರ್ ಅರ್ಜುನ್,ಮಾಸ್ಟರ್ ಸಂಜಯ್, ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ,ಅವರೆಲ್ಲರೂ ಆಗಲೇ ಸಕ್ಸಸ್ ಕಂಡವರು ಮತ್ತು ದೊಡ್ಡವರಾದ ಮೇಲೂ ಅದೇ ಚಾರ್ಮನ್ನ ಕಂಟಿನ್ಯೂ ಮಾಡಿದವರು..

ಸಧ್ಯ ಕನ್ನಡ ಚಿತ್ರೋದ್ಯಮದಲ್ಲಿ ಬಹಳಷ್ಟು ಮಾಸ್ಟರ್ಸ್ ಮತ್ತು ಬೇಬಿ ಕಲಾವಿದರು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದಾರೆ, ಅದರಲ್ಲಿ ಆರಾಧ್ಯ ಎನ್ ಚಂದ್ರ ಎಂಬ,ಮುದ್ದಾದ ಬಾಲ ನಟಿ ಕೂಡಾ ಒಬ್ಬಳು ಎಂದರೆ,ತಪ್ಪಾಗಲಿಕ್ಕಿಲ್ಲ..
ಸಧ್ಯ ಎಂಟು ವರ್ಷದ ಬಾಲಕಿಯಾಗಿರುವ ಆರಾಧ್ಯ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು,ತಿಂಗಳಲ್ಲಿ ಹದಿನೈದು ದಿನ ಹೈದ್ರಾಬಾದ ನಲ್ಲಿ ತೆಲುಗು ಪ್ರಾಜೆಕ್ಟ್ ನಲ್ಲಿ ಇರುತ್ತಾಳೆ..
ಉಳಿದ ದಿನಗಳು ಕನ್ನಡದಲ್ಲಿ ಬ್ಯುಸಿ..
ಶಾಲೆಯಿಂದ ಅನುಮತಿ ಪಡೆದಿರುವ ಆರಾಧ್ಯ,ಆನ್ ಲೈನ್ ನಲ್ಲಿ ಪಾಠಗಳನ್ನು ಓದುತ್ತಾ,ಪರೀಕ್ಷೆ ಬರೆಯುತ್ತ ಚಿತ್ರೀಕರಣ ಇಲ್ಲದ ಸಮಯದಲ್ಲಿ ಶಾಲೆಗೆ ಹೋಗುತ್ತಾಳಂತೆ..
ಇಪ್ಪದೈದಕ್ಕೂ ಹೆಚ್ಚು ಕಮರ್ಷಿಯಲ್ ಜಾಹೀರಾತುಗಳಲ್ಲಿ ನಟಿಸಿರುವ ಆರಾಧ್ಯ, ಕವಲುದಾರಿ,ಯಜಮಾನ,ಜೆಂಟಲ್ ಮ್ಯಾನ್,ಒಡೆಯ,ಗೋವಿಂದ ಗೋವಿಂದ, ಟಾಮ್ & ಜೇರಿ,ಜೇಮ್ಸ್, ವಿಕ್ರಾಂತ ರೋಣ,ಹೋಪ,ಬೈರಾಗಿ ಹೀಗೆ ಬಿಡುಗಡೆಯಾದ ಎಲ್ಲ ಚಿತ್ರಗಳಲ್ಲೂ ನಟಿಸಿ,ಎಲ್ಲ ಸ್ಟಾರ್ ಕಲಾವಿದರಿಂದ ಜೈ ಮತ್ತು ಸೈ ಎನಿಸಿಕೊಂಡಿದ್ದಾಳೆ.
ಆರಾಧ್ಯ ನಟಿಸಿರುವ ಇನ್ನೂ ಬಿಡುಗಡೆ ಆಗಬೇಕಿರುವ ಚಿತ್ರಗಳ ಸಂಖ್ಯೆ ದೊಡ್ಡದಿದೆ.ವಿಜಯ್ ರಾಘವೇಂದ್ರ ಅಭಿನಯದ ಕದ್ದಚಿತ್ರ,ಮೈ ಡಾಟರ್,ಫಿಲ್ಮ್ 2020,ದ್ವಿಪಾತ್ರ, ಅಹಲ್ಯಾ,ಪೆಂಟಗಾನ್,ಶಿವಾಜಿ ಸುರತ್ಕಲ್ ಪಾರ್ಟ್ 2, ಮಿಸ್ಟರ್ ಬ್ಯಾಚಲರ್,ತಾ,ಏಪ್ರಿಲ್,ಚಾರ್ವಿ ಮತ್ತು ಕುರ್ಚಿ ಮಿರ್ಚಿ ಇತ್ಯಾದಿ..
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಸಾಕ್ಷಿಯಾಗಿರುವ ಆರಾಧ್ಯ,ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ಮಗಳ ಸಾಧನೆಗೆ ಸದಾ ಬೆಂಬಲವಾಗಿ ನಿಂತ,ಆಕೆಯ ಹೆತ್ತವರಿಗೂ ನಾವು ನೆನೆಯಲೇಬೇಕು..
ಮತ್ತೊಮ್ಮೆ ಎಲ್ಲರಿಗೂ,ಮಕ್ಕಳ ದಿನಾಚರಣೆಯ ಶುಭಾಷಯ..
ರವೀ ಸಾಸನೂರ್..
ಕನ್ನಡ ಪಿಚ್ಚರ್…