ಪಿಚ್ಚರ್ UPDATE

ಈ ವಾರ ಥಿಯೇಟರ್‌ ನಲ್ಲಿ ಚಾಂಪಿಯನ್‌ ದರ್ಬಾರ್‌

ಈ ವಾರ ಥಿಯೇಟರ್‌ ನಲ್ಲಿ ಚಾಂಪಿಯನ್‌ ದರ್ಬಾರ್‌
  • PublishedOctober 12, 2022

ಟ್ರೇಲರ್‌ ಮತ್ತು ಮೇಕಿಂಗ್‌ ನಿಂದ ಸಖತ್‌ ಸೌಂಡ್‌ ಮಾಡುತ್ತಿರೋ ಚಾಂಪಿಯನ್‌ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ..ಇದೇ ವಾರ ಸಿನಿಮಾ ತೆರೆಗೆ ಬರಲಿದ್ದು ಚಿತ್ರ ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ…
ಶಿವಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶಿವಾನಂದ್ ಎಸ್ ನೀಲಣ್ಣನವರ್ ನಿರ್ಮಿಸಿರುವ, ಶಾಹುರಾಜ್ ಶಿಂಧೆ ನಿರ್ದೇಶನದ ” ಚಾಂಪಿಯನ್ ದ ಮೂಲಕ ಸಚಿನ್ ಧನಪಾಲ್ ನಾಯಕನಾಗಿ ಎಂಟ್ರಿಕೊಡ್ತಿದ್ದಾರೆ…

ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅದಿತಿ ಪ್ರಭುದೇವ “ಚಾಂಪಿಯನ್” .. ಹಿರಿಯ ನಟ ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಅಶೋಕ್ ಶರ್ಮ, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಮುಂತಾದವರು ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ..

ಇನ್ನು ಸಿನಿಮಾದಲ್ಲಿ ಖ್ಯಾತ ನಟಿ ಸನ್ನಿಲಿಯೋನ್ ನಟಿಸಿರೋದು ಸಿನಿಮಾದ ಹೈಲೆಟ್‌ ಈಗಾಗಲೇ ಸನ್ನಿಲಿಯೋನ್‌ ಜೊತಗಿನ ಹಾಡೂ ಬಿಡುಗಡೆ ಆಗಿದ್ದು ಈ ಹಾಡಿನಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ…
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಸರವಣನ್ ನಟರಾಜನ್ ಛಾಯಾಗ್ರಹಣ, ವೆಂಕಿ ಯು ಡಿ ವಿ ಸಂಕಲನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನ “ಚಾಂಪಿಯನ್” ಚಿತ್ರಕ್ಕಿದೆ.. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದು ಬೇಸರದ ಸಂಗತಿ ಅಂದ್ರೆ ಸಿನಿಮಾ ನಿರ್ದೇಶನ ಮಾಡಿದ ನಿರ್ದೇಶಕ ಶಾಹುರಾಜ್ ಕೋವಿಡ್‌ ನಿಂದ ವಿಧಿವಶರಾಗಿದ್ದಾರೆ…

ಚಾಂಪಿಯನ್‌ ಸಿನಿಮಾಗಾಗಿ ನಾಯಕ ಸಚಿನ್‌ ಸಾಕಷ್ಟು ತಯಾರಿ ಮಾಡಿಕೊಂಡಿದ್ದು ಅದ್ರ ವಿಡಿಯೋಗಳು ಈಗಾಗಲೇ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. ನಟ ಹಾಗೂ ನಿರ್ಮಾಪಕ ಇಬ್ಬರ ಮನೆಯವರು ಆರ್ಮಿ ಕುಟುಂಬದ ಹಿನ್ನಲೆ ಹೊಂದಿದ್ದು ಸಿನಿಮಾರಂಗದಲ್ಲಿ ಏನಾದ್ರು ಸಾಧನೆ ಮಾಡಲೇಬೇಕು ಅಂತ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದಾರೆ….

Written By
Kannadapichhar