News

`ಕೇಳು ಜನಮೇಜಯ’ ಇವ್ರು ಚಕ್ರವರ್ತಿ ಚಂದ್ರಚೂಡ್‌..!

`ಕೇಳು ಜನಮೇಜಯ’ ಇವ್ರು ಚಕ್ರವರ್ತಿ ಚಂದ್ರಚೂಡ್‌..!
  • PublishedJanuary 26, 2021

ಸಾಖಷ್ಟು ಮಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಹಲವು ವಿಭಾಗಗಳಲ್ಲಿ ಸಾಕಷ್ಟು ದಿನಗಳಿಂದ ಬ್ಯುಸಿಯಾಗಿದ್ರೂ, ತೆರೆಗೆ ಬರುವ ಪ್ರಯತ್ನ ಮಾಡದೇ, ತೆರೆಗೆ ಬರುವವರ ಬೆಂಬಲವಾಗಿನಿಂತಿರ್ತಾರೆ. ಅಂಥಾ ಸಿನಿಪ್ರಿಯರಲ್ಲಿ ಚಕ್ರವರ್ತಿ ಚಂದ್ರಚೂಡ್‌ ಕೂಡ ಒಬ್ರು, ಸಿನಿಮಾ ಬರಹಗಾರರಾಗಿ, ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಚಂದ್ರಚೂಡ್,‌ ಈಗ ಡಿಜೆ ಚಕ್ರವರ್ತಿಯಾಗಿ ಬದಲಾಗಿದ್ದಾರೆ. ಬರೀ ಹೆಸರಲ್ಲಷ್ಟೆ ಅಲ್ಲ, ಲುಕ್ಸ್‌ನಲ್ಲೂ ಇವ್ರೇನಾ ಚಂದ್ರಚೂಡ್‌ ಅನ್ನೋ ಅಷ್ಟು ಬದಲಾಗಿದ್ದಾರೆ. ಈ ಬದಲಾವಣೆಗೆ ಕಾರಣ ಚಂದ್ರಚೂಡ್‌ ನಟಿಸ್ತಾ ಇರೋ ಹೊಸ ಸಿನಿಮಾ. ಈ ಸಿನಿಮಾದ ಹೆಸರೇ ʻಕೇಳು ಜನಮೇಜಯʼ

ಕೇಳು ಜನಮೇಜಯ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ನ ಶೇರ್‌ ಮಾಡೋ ಮೂಲಕ ಈ ವಿಷಯವನ್ನ ಬಹಿರಂಗ ಪಡಿಸಿದ್ದಾರೆ. ಕಟ್ಟುಮಸ್ತು ದೇಹದ ಜೊತೆಗೆ ಚಂದ್ರಚೂಡ್‌ ಮಿಂಚ್ತಾ ಇರೋ ಪೋಸ್ಟರ್‌ ಎಲ್ಲರ ಗಮನ ಸೆಳೆದಿದೆ. ಸಂತೋಷ್‌ ಕೊಡಂಕೇರಿ ನಿರ್ದೇಶನ ಮಾಡ್ತಿರೋ ಸಿನಿಮಾವನ್ನ ದೃಷ್ಟಿ ಮೀಡಿಯಾ & ಪ್ರೊಡಕ್ಷನ್ಸ್‌ ಹಾಗೂ ರಘುನಾಥ್‌ ನಿರ್ಮಾಣ ಮಾಡ್ತಿದ್ದಾರೆ. ಸಿನಿಮಾದ ಉಳಿದ ಮಾಹಿತಿಯನ್ನ ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ. ಚಂದ್ರಚೂಡ್‌ ಅವ್ರಿಗೆ ಇಂಡಸ್ಟ್ರಿಯ ಆತ್ಮೀಯರೆಲ್ಲಾ ಮನಸಾರೆ ಶುಭಾಶಯ ಕೋರಿದ್ದಾರೆ.

Written By
Kannadapichhar

Leave a Reply

Your email address will not be published. Required fields are marked *