ಫೆ.3ಕ್ಕೆ `By 2 ಲವ್’ ಟೈಟಲ್ ಸಾಂಗ್ ರಿಲೀಸ್..!
ದಿ ಮೋಸ್ಟ್ ಹ್ಯಾಪನಿಂಗ್, ರೊಮ್ಯಾಂಟಿಕ್ ಕಪಲ್ ಬಜಾರ್ ಹೀರೋ ಶೋಕ್ದಾರ್ ಧನ್ವೀರ್ & ಸಖತ್ ಕ್ಯೂಟ್ ಆಗಿರೋ ಶ್ರೀಲೀಲಾ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ `By 2 ಲವ್’ನ ಟೈಟಲ್ ಟ್ರಾಕ್ ಇದೇ ಫೆ.3ಕ್ಕೆ ಬೆಳಗ್ಗೆ 11.22ಕ್ಕೆ ಕೆವಿಎನ್ ಪ್ರೊಡಕ್ಷನ್ಸ್‌ನ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗ್ತಾ ಇದೆ. ಬಿ.ಅಜನೀಶ್ ಲೋಕನಾಥ್ ಈ ಹಾಡಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ರಿಲೀಸ್ ಆಗ್ತಾ ಇರೋ ಸಿನಿಮಾಕ್ಕೆ ಅಲೆಮಾರಿ, ಕಾಲೇಜ್ ಕುಮಾರ ಖ್ಯಾತಿಯ ನಿರ್ದೇಶಕ ಹರಿ ಸಂತು ಆಕ್ಷನ್ ಕಟ್ ಹೇಳ್ತಿದ್ದಾರೆ. ಟಾಮ್ & ಜೆರ್ರಿ ಥರಾ ಇರೋ ಲವ್ವರ್‌ಗಳ ಕಥೆ ಥರಾ ಕಾಣೋ ಈ ರೊಮ್-ಕಾಮ್ ಯೂತ್‌ಗಳಿಗೆ ಎಂಟರ್‌ಟೈನ್‌ಮೆಂಟ್ ಜೊತೆಗೆ ಸಂತೂ ಶೈಲಿಯಲ್ಲೇ ಒಂದು ಸ್ಟ್ರಾಂಗ್ ಮೆಸೇಜ್ ಕೂಡ ನೀಡಲಿದೆ `By 2 ಲವ್’. ಶೀಘ್ರದಲ್ಲೇ ಸಿನಿಮಾ ರಿಲೀಸ್ ಡೇಟ್ ಕೂಡ ಅನೌನ್ಸ್ ಮಾಡಲಿದೆ ಸಿನಿಮಾ ಟೀಮ್.