new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ಮಿಡ್‌ ಎಲಿಮಿನೇಷನ್‌ ಪಕ್ಕ:ಯಾರಿಗೆ ಫಿನಾಲೆ ಭಾಗ್ಯ ಇಲ್ಲ?

ಮಿಡ್‌ ಎಲಿಮಿನೇಷನ್‌ ಪಕ್ಕ:ಯಾರಿಗೆ ಫಿನಾಲೆ ಭಾಗ್ಯ ಇಲ್ಲ?
  • PublishedJanuary 6, 2026

ಬಿಗ್‌ ಬಾಸ್‌ ಕನ್ನಡದ 12ನೇ ಆವೃತಿಯು ಮುಗಿಯುವ ಹಂತದಲ್ಲಿದೆ.ಗಿಲ್ಲಿ ನಟ,ಕಾವ್ಯ ಶೈವ,ರಕ್ಷಿತಾ ಶೆಟ್ಟಿ,ರಾಶಿಕಾ ಶೆಟ್ಟಿ,ಅಶ್ವಿನಿ ಗೌಡ,ಧನುಷ್‌ ಗೌಡ,ರಘು,ಧೃವಂತ್‌ ಸದ್ಯಕ್ಕೆ ಎಂಟು ಮಂದಿ ಬಿಗ್‌ ಮನೆಯ ರೇಸ್‌ ನಲ್ಲಿ ಉಳಿದಿದ್ದಾರೆ.ಇದೀಗ ಸ್ಪರ್ಧಿಗಳ ಅಭಿಮಾನಿಗಳ ಮನದಲ್ಲಿ ತಳಮಳ ಶುರುವಾಗಿದೆ.ಅದಕ್ಕೆ ಕಾರಣ ಮಿಡ್‌ ವೀಕ್‌ ಎಲಿಮಿನೇಷನ್‌ ಕತ್ತಿ ತಮ್ಮ ನೆಚ್ಚಿನ ಕಂಟೆಸ್ಟೆಂಟ್‌ ಗಳ ತಲೆ ಮೇಲೆ ಸುತ್ತುತ್ತಿರುವುದು.

ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಇದೀಗ ಹಲವು ಮೂಲಗಳ ಮಾಹಿತಿಯ ಪ್ರಕಾರ ಈ ವಾರ ಒಬ್ಬ ಸ್ಪರ್ಧಿ ವಾರದ ಮಧ್ಯದಲ್ಲೇ ಮನೆಯಿಂದ ಹೊರ ಬರಲ್ಲಿದ್ದಾರೆ ಎನ್ನುವ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.ಇನ್ನು ಇದರ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಹೊರ ಬೀಳದೇ ಇದ್ದರು,ಸೋಷಿಯಲ್‌ ಮೀಡಿಯಾದಲ್ಲಿ ಜನರ ಊಹೆಗಳು ಮತ್ತು ಲೆಕ್ಕಾಚಾರಗಳು ಬಹಳ ಬಿರುಸಿನಿಂದ ಸಾಗುತ್ತಿದೆ.ಹಾಗಾದ್ರೆ ಜನರ ಊಹೆಯ ಪ್ರಕಾರ ಈ ವಾರ ಯಾವ ಸ್ಪರ್ಧಿಗಳೆಲ್ಲಾ ಬಾಟಮ್‌ ನಲ್ಲಿ ಡೇಂಜರ್‌ ಜೋನ್‌ ನಲ್ಲಿ ಇದ್ದಾರೆ ಅನ್ನೋದರ ವರದಿ ಇಲ್ಲಿದೆ.

ರಾಶಿಕ ಶೆಟ್ಟಿ ಡೇಂಜರ್‌ ಜೋನ್‌ ನಲ್ಲಿ ?

ಈ ಬಾರಿಯ ದೊಡ್ಮನೆಯ ಟಾಸ್ಕ್‌ ಕ್ವೀನ್‌ ಎಂದೇ ಫೇಮಸ್‌ ಆಗಿರುವ ರಾಶಿಕ ಡೇಂಜರ್‌ ಜೋನ್‌ ನಲ್ಲಿರುವ ಮೊದಲ ಸ್ಪರ್ಧಿ ಎಂದು ಜನ ಊಹಿಸಿದ್ದಾರೆ. ಪ್ರತಿ ಟಾಸ್ಕನ್ನು 100% ಎಫರ್ಟ್‌ ಹಾಕಿ ಆಡೋ ಇವರು ಸದ್ಯಕ್ಕೆ ಈ ವಾರ ಹೊರ ಬರೋ ಎಲ್ಲಾ ಚಾನ್ಸ್‌ ಇದೆ ಅಂತ ಬಿಗ್‌ ಮನೆ ಆಡಿಯನ್ಸ್‌ ಹೇಳ್ತಾ ಇದ್ದಾರೆ.ಹಾಗಾದ್ರೆ ಇವರಿಗೆ ಮೈನಸ್‌ ಆಗ್ಬೋದಾದ ವಿಷಯಗಳೆಂದರೆ ಒಂದು ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಂದಿದ್ದ ಸೂರಜ್‌ ಸಿಂಗ್‌ ಅವರ ಜೊತೆ ರಾಶಿಕ ಅವರಿಗೆ ಒಳ್ಳೆಯ ಗೆಳತನವಿತ್ತು.ಆದರೆ ಎಲ್ಲೋ ಒಂದು ಕಡೆ ಸೂರಜ್‌ ಅವರ ಗೇಮ್‌ ಹಾಳಾಗಲೂ ಮೇನ್‌ ಕಾರಣವೆ ಇವರ ಸ್ನೇಹ ಎನ್ನುವ ಆರೋಪ ರಾಶಿಕ ಮೇಲೇ ಬಂದಿತ್ತು.ಇನ್ನೊಂದು ರಾಶಿಕ ಅವರು ಟಾಸ್ಕ್‌ ನಲ್ಲಿ ಮುಂದೆ ಇದ್ದರು ತಮ್ಮ ಕೆಲವೊಂದು ನಿರ್ಧಾರಗಳಿಂದ ವೋಟಿಂಗ್‌ ನಲ್ಲಿ ಹಿಂದುಳಿದಿದ್ದಾರೆ ಎಂಬುವುದು ಜನರ ಅಭಿಪ್ರಾಯ.

ಧೃವಂತ್‌ ಹೊರ ಹೋಗಬಹುದು!

ಬಿಗ್‌ ಬಾಸ್‌ ರೇಸ್ನಲ್ಲಿ ಡೇಂಜರ್‌ ಜೋನ್‌ ನಲ್ಲಿರುವ ಮತ್ತೊಬ್ಬ ವ್ಯಕ್ತಿ ಧೃವಂತ್‌ .ಬಿಗ್‌ ಬಾಸ್‌ ನ ಆರಂಭಿಕ ಹಂತದಲ್ಲೇ ಇವರು ಹೊರಬರುತ್ತಾರೆ ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.ಆರಂಭದಲ್ಲಿ ಮನೆಯಲ್ಲಿ ಅತಿ ಕಡಿಮೆ ಪಾಲ್ಗೊಳ್ಳುವಿಕೆ ಎಂದು ಅನಿಸಿದ್ದೆ ಧೃವಂತ್‌.ಆದರೆ ವಾರ ಕಳೆದಂತೆ ಅವರ ಆಟದ ವೇಗ ಮತ್ತುನೇರ ಮಾತು ಎಲ್ಲರಿಗು ಇಷ್ಟ ಆಗ್ತಾ ಬಂತು .

ಆದರೂ ಅವರಿಗೆ ಹಿನ್ನಡೆಯಾಗಾಲು ಇರುವ ಕಾರಣವೆಂದರೆ ಅವರ ಮಾತಿನ ಮೇಲೆ ಅವರಿಗೆ ನಿಯಂತ್ರಣವಿಲ್ಲದಿರುವುದು .ಜಗಳದ ಸಮಯದಲ್ಲಿ ಅವರ ಕೆಲವೊಂದು ಪದಗಳ ಪ್ರಯೋಗವು ನೋಡುಗರಿಗೆ ಇಷ್ಟವಾಗಲ್ಲಿಲ್ಲ. ಜತೆಗೆ ಮನೆಯಲ್ಲಿ ಎಲ್ಲರಿಗು ಕಂಪೇರ್‌ ಮಾಡಿದರೆ ಧೃವಂತ್‌ ಅವರಿಗಿರುವ ಫ್ಯಾನ್‌ ಬೇಸ್‌ ಕಮ್ಮಿ ಎನ್ನುವುದು ಜನಗಳ ಅಭಿಪ್ರಾಯ. ಹಾಗಾಗಿ ಈ ಬಾರಿಯ ಮಿಡ್‌ ವೀಕ್‌ ಎಲಿಮಿನೇಟ್‌ ಆಗಬಹುದು ಎಂದು ಕೇಳಿ ಬರುತ್ತಿದೆ.

Written By
Kannada Picchar

Leave a Reply

Your email address will not be published. Required fields are marked *