ಗಲ್ಲಿ ಗಲ್ಲಿಲೂ ಗಿಲ್ಲಿ ಹವಾ!
ಬಿಗ್ ಬಾಸ್ 12 ರ ವಿನ್ನರ್ ಪಟ್ಟ ಯಾರ ಪಾಲಾಗುತ್ತೆ? ಅನ್ನೋದು ಈಗ ಕರ್ನಾಟಕದಾದ್ಯಂತ ಕುತೂಹಲ ಮೂಡಿಸಿರುವ ವಿಷ್ಯ. ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಯನ್ನ ಗೆಲ್ಲಿಸಲು ಹಲವಾರು ರೀತಿ ಮತ, ಪ್ರಚಾರಗಳನ್ನು ಮಾಡುತ್ತಿದ್ದಾರೆ.ಅದ್ರಲ್ಲೂ ಟೈಟಲ್ ವಿನ್ನರ್ ರೇಸ್ ಅಲ್ಲಿ ಇರೋ ಗಿಲ್ಲಿ ನಟರಾಜ್ ಕ್ರೇಜ್ ಅಂತೂ ದಿನೇ ದಿನೇ ಹೆಚ್ಚಾಗ್ತಿದೆ.
ದೇಶ ಕಾಯೋ ಸೈನಿಕರಿಂದ ಹಿಡಿದು ನಾಡಿನ ಪೊಲೀಸರು, ವಕೀಲರು ಗಿಲ್ಲಿ ಅವರಿಗೆ ವೋಟ್ ಹಾಕುತ್ತಿರುವ ವಿಡಿಯೋಗಳು ವೈರಲ್ ಆಗುತ್ತಿದೆ.ಅಜ್ಜಿಯವರಿಂದ ಹಿಡಿದು ಸಣ್ಣ ಮಕ್ಕಳ ವರೆಗೂ ಗಿಲ್ಲಿ ಗೆಲ್ಬೇಕು ಅಂದ್ರೆ ಇನ್ನು ಕರ್ನಾಟಕವಲ್ಲದೆ ಭಾರತದ ಉಳಿದ ರಾಜ್ಯದಲ್ಲಿರೋ ಗಿಲ್ಲಿ ಅಭಿಮಾನಿಗಳು, ವಿದೇಶದಲ್ಲಿರುವ ಕನ್ನಡಿಗರು ಗೆದ್ರೆ ಗಿಲ್ಲಿನೆ ಗೆಲ್ಬೇಕು ಅಂತ ಹೇಳ್ತಿದ್ದಾರೆ.ಹೋರಿಗಳ ಮೇಲೆ, ವಾಹನಗಳ ಮೇಲೆ ಗಿಲ್ಲಿ ಫೋಟೋ ಹಾಕ್ಕೊಂಡು ದೊಡ್ಡ ಮಟ್ಟದಲ್ಲಿ ಸಪೋರ್ಟ್ ಮಾಡ್ತಿದ್ದಾರೆ.
ಮಳವಳ್ಳಿಯ ಮಾತಿನ ಮಲ್ಲನಿಗೆ ತೋರಿಸುತ್ತಿರುವ ಪ್ರೀತಿಯನ್ನು ನೋಡುತ್ತಿರುವ ಬಿಗ್ ಬಾಸ್ ಅಭಿಮಾನಿಗಳು ಪಕ್ಕ ಈ ಬಾರಿ ಕಿರುತೆರೆಯ ದೊಡ್ಮನೆ ಕಪ್ ಗಿಲ್ಲಿದೇ ಆಗುತ್ತೆ ಅನ್ನುತ್ತಿದ್ದಾರೆ.