ಬಿಗ್ ಬಾಸ್ ನಲ್ಲೂ ಗಿಲ್ಲಿ ಹವಾ.. ಡೆವಿಲ್ ನಲ್ಲೂ ಗಿಲ್ಲಿದೇ ಹವಾ! ಕ್ಯಾರೆಕ್ಟರ್ ಏನು..?
By Pallavi N Raj
ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅಭಿನಯದ ಬಹುನಿರೀಕ್ಷಿತ ಡೆವಿಲ್ ಸಿನಿಮಾದ ಟ್ರೈಲರ್ ರೀಲಿಸ್ ಆಗಿದೆ.. ಬಹುತಾರಾಬಳಗವೇ ಇರೋ ಚಿತ್ರದಲ್ಲಿ ಬಿಗ್ ಬಾಸ್ ಸೀಸನ್ 12 ಸ್ಪರ್ಧಿ ಗಿಲ್ಲಿನಟ ಹೈಲೇಟ್ ಆಗಿದ್ದಾರೆ..
ಹೌದು.. ಬಿಗ್ ಬಾಸ್ ಪ್ರಾರಂಭವಾಗಿ ಸುಮಾರು 65 ದಿನಗಳನ್ನ ಯಶಸ್ವಿಯಾಗಿ ಪೂರೈಸಿದೆ.. ದೊಡ್ಮನೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳೋದು ಅಫ್ ಕೋರ್ಸ್ ಗಿಲ್ಲಿನಟ ಬಿಗ್ ಮನೆಯಲ್ಲಿ ಹವಾ ಮಾಡ್ತೀರೋ ಗಿಲ್ಲಿ ಆಚೆಯೂ ತಮ್ಮದೆ ಆದ ಛಾಪನ್ನು ಮೂಡಿಸಿದ್ದಾರೆ.. ಗಿಲ್ಲಿಗೆ ತಮ್ಮದೆ ಆದ ಅಭಿಮಾನಿ ಬಳಗವಿದೆ. ನಮ್ಮ ರಾಜ್ಯದಲ್ಲೂ ಅಲ್ದೆ ಬೇರೆ ಬೇರೆ ಕಡೆಗಳಲ್ಲಿ ಗಿಲ್ಲಿ ಫೇಮಸ್ ಆಗಿದ್ದಾರೆ..
ಯೆಸ್..ಗಿಲ್ಲಿನಟ ಅಂದರೆ ಮಾಸ್ ಡೈಲಾಗ್, ಮಾಸ್ ಡೈಲಾಗ್ ಅಂದ್ರೆ ಗಿಲ್ಲಿ.. ಡೈಲಾಗ್ ಹೊಡ್ಕೊಂಡೆ ಗಿಲ್ಲಿ ಬಿಗ್ ಬಾಸ್ ಮನೆವರೆಗೂ ಬಂದ್ರು ಜನ ಅಲ್ಲೂ ಗಿಲ್ಲಿನ ಕೈಬಿಟ್ಟಿಲ್ಲ ಅಷ್ಟರ ಮಟ್ಟಿಗೆ ಗಿಲ್ಲಿ ಸಖತ್ ಫೇಮಸ್ ಆಗಿದ್ದಾರೆ.. ಹೀಗಿರುವಾಗಲೇ ದಚ್ಚು ಅಭಿನಯದ ಡೆವಿಲ್ ನಲ್ಲಿ ಗಿಲ್ಲಿ ಬೇರೆಯದೆ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.. ಅದ್ರಲ್ಲೂ ಗಿಲ್ಲಿ ಹೇಳೋ ಡೈಲಾಗ್ ದಾಸನ ಅಭಿಮಾನಿಗಳಿಗೆ ಅಚ್ಚುಮೆಚ್ಚಾಗಿದೆ
ಅಂದಹಾಗೆ.. ಬಿಗ್ ಬಾಸ್ ಮೂಲಕ ಭಾರೀ ಜನಪ್ರಿಯತೆ ಪಡೆದಿರುವ ಗಿಲ್ಲಿ ಖಡಕ್ ಲುಕ್ನಲ್ಲಿ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಚು ಪೊಲೀಸ್ ಎದುರು ಕಾಲ್ಮೇಲೆ ಕಾಲು ಹಾಕಿ ಸಖತ್ತಾಗಿ ಡೈಲಾಗ್ ಹೊಡೆದಿದ್ದಾರೆ. ಎಕ್ಸ್ಕ್ಯೂಸ್ ಮೀ ಪಿಸಿ.. ಚೂರು AC ಹಾಕಮ್ಮ.. ಲಾಟ್ ಆಫ್ ಸೆಕೆ ಅಂತಾ ಡೈಲಾಗ್ ಹೊಡೆದಿದ್ದಾರೆ.ಈಗಂತೂ ಗಿಲ್ಲಿ ಹವಾ ಕೇಳೋದೆ ಬೇಡಾ.. ಈ ಸಿನಿಮಾದಲ್ಲಿ ಗಿಲ್ಲಿ ವಿಲನೀಶ್ ಕಾಮಿಡಿ ಆ್ಯಕ್ಟರ್ ಎನ್ನಲಾಗ್ತೀದೆ ಬಟ್ ಚಿತ್ರತಂಡ ಇನ್ನು ಗುಟ್ಟುರಟ್ಟು ಮಾಡಿಲ್ಲ..
ಇನ್ನು.. ನಟ ದರ್ಶನ್ ನಟನೆಯ ಬಹುನಿರೀಕ್ಷೆಯ ದಿ ಡೆವಿಲ್ ಸಿನಿಮಾ ಇದೇ ಡಿಸೆಂಬರ್ 11ರಂದು ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಚಿತ್ರತಂಡ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದು,ದಿ ಡೆವಿಲ್ ಸಿನಿಮಾದಲ್ಲಿ ಗಿಲ್ಲಿ ನಟ ಮುಖ್ಯಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ ಇದು ಗಿಲ್ಲಿ ಅಭಿಮಾನಿಗಳ ಸಂತೋಷಕ್ಕೆ ಪಾರಾವೆ ಇಲ್ಲದಂತಾಗಿದೆ..
ಒಟ್ನಲ್ಲಿ.. ಇತ್ತಿಚಿಗೆ ಚಿತ್ರತಂಡ ಗಿಲ್ಲಿ ನಟ ಅವರ ಲುಕ್ ಪೋಸ್ಟರ್ ಅನ್ನು ರಿವೀಲ್ ಮಾಡಿತ್ತು.ಈಗ ಟ್ರೈಲರ್ನಲ್ಲೂ ಗಿಲ್ಲಿ ಡೈಲಾಗ್ ಕೇಳಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಏನಿ ವೇ ದರ್ಶನ್ ಗಿಲ್ಲಿ ಜೋಡಿ ಹೇಗೆ ವರ್ಕೌಟ್ ಆಗಿದೆ ಸಿನಿಮಾದಲ್ಲಿ ಕಾದು ನೋಡ್ಬೇಕು..