new updates News ಪಿಚ್ಚರ್ stories ಪಿಚ್ಚರ್ UPDATE

ಬಿಗ್ ಬಾಸ್ ಅಶ್ವಿನಿ ಅಸಹ್ಯ ವರ್ತನೆ ಅಂತ ನೆಟ್ಟಿಗರು ಛೀಮಾರಿ..

ಬಿಗ್ ಬಾಸ್ ಅಶ್ವಿನಿ ಅಸಹ್ಯ ವರ್ತನೆ ಅಂತ ನೆಟ್ಟಿಗರು ಛೀಮಾರಿ..
  • PublishedJanuary 6, 2026


ಬಿಗ್ ಮನೆಯ ಆಟ ಕಲರ್ ಫುಲ್ ಆಗಿದೆ.. ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಮುಗಿಯೋದಕ್ಕೆ ಇನ್ನೆನೂ ಕೆಲವೇ ಕೆಲವು ದಿನ ಬಾಕಿ ಇರೋದು ಸ್ಪರ್ಧಿಗಳ ಜಗಳ , ಕೋಪ ಗಲಾಟೆ ಡೇ ಬೈ ಡೇ ಹೆಚ್ಚಾಗ್ತಿದೆ.. ಹೀಗಿರುವಾಗವೇ ಬಿಗ್ ಮನೆಯಲ್ಲಿ ಕಿಚ್ಚನ ಎದುರಲ್ಲೆ ರಾಶಿಕಾಗೆ ಅಶ್ವಿನಿ ಬಾಯಿಗೆ ಬಂದಂತೆ ಬೈದಿದ್ದಾರೆ..

    ಹೌದು.. ಬಿಗ್ ಬಾಸ್ ಮನೆಯಲ್ಲಿ ಉಂಟಾದ ಗಲಾಟೆಯಲ್ಲಿ ನಾನು ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಿದ್ದೇನೆ ಅಂತ ಅಶ್ವಿನಿ ಹೇಳಿಕೊಂಡಿದ್ದರು. ಆದರೆ, ಈಗ ಹೆಣ್ಣು ಮಕ್ಕಳ ಬಗ್ಗೆಯೇ ಕೆಟ್ಟದಾಗಿ ಮಾತನಾಡಿ ಚರ್ಚೆಗೆ ಕಾರಣರಾಗಿದ್ದಾರೆ. ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು ಎಂಬ ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ‘ಅಶ್ವಿನಿ ಮಹಿಳೆಯರ ಪರ ನಿಲ್ಲೋದು ಅಂದ್ರೆ ಇದೇನಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
   ವೀಕೆಂಡ್​​ನಲ್ಲಿ ಚಟುವಟಿಕೆ ಒಂದನ್ನು ನೀಡಲಾಯಿತು. ಇದರ ಅನುಸಾರ ಪಂಚಿಂಗ್ ಬ್ಯಾಗ್ ಮೇಲೆ ತಮಗೆ ಇಷ್ಟ ಇಲ್ಲದವರ ಫೋಟೋ ಹಾಕಬೇಕು. ಆ ಬಳಿಕ ಕೈಗೆ ಪಂಚಿಂಗ್ ಬಾಕ್ಸ್ ಹಾಕಿಕೊಂಡು ಗುದ್ದಬೇಕು. ಅಶ್ವಿನಿ ಅವರು ರಾಶಿಕಾ ಹೆಸರು ತೆಗೆದುಕೊಂಡರು. ಅವರು ನೀಡಿದ ಕಾರಣ ಚರ್ಚೆಗೆ ಕಾರಣ ಆಗಿದೆ
    ನಿನ್ನ ವಯಸ್ಸಿಗೂ ನನ್ನ ವಯಸ್ಸಿಗೂ ತುಂಬಾ ಅಂತರ ಇದೆ. ನೀನೆ ಸ್ಟ್ರಾಂಗ್ ಎಂದು ಹೇಳಿ ಕೊಳ್ಳುತ್ತಾ ಇದ್ದೀಯಾ. ಆದರೆ ನೀನು ಸ್ಟ್ರಾಂಗ್ ಅಲ್ಲ. ಕಳೆದ ವಾರ ನಿಮ್ಮನ್ನು ನಾವು ಸೋಲಿಸಿದ್ದೇವೆ ಎಂದು ಅಶ್ವಿನಿ ಹೇಳಿದ್ರು.. 
    ರಾಶಿಕಾ ಬಗ್ಗೆ ಅಶ್ವಿನಿ ಆಡಿದ ಮಾತು ಚರ್ಚೆ ಹುಟ್ಟುಹಾಕಿದೆ. ರಾಶಿಕಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಧನುಷ್ ಆಡಿದ್ದಕ್ಕೆ ಅಶ್ವಿನಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಹೋಗಿದ್ದು. ಧೈರ್ಯ ಇದ್ದರೆ ಅವರು ನನ್ನ ಜೊತೆ ಟಾಸ್ಕ್ ಆಡಿ ಗೆಲ್ಲಲಿ ಅಂತ ರಾಶಿಕಾ ಸವಾಲು ಹಾಕಿದ್ದಾರೆ. ಅಶ್ವಿನಿ ತುಂಬಾ ಅಸಹ್ಯವಾಗಿ ಯೋಚಿಸ್ತಾರೆ ಎಂದು ರಾಶಿಕಾ ಅಭಿಪ್ರಾಯಪಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಅಶ್ವಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *