6-7ಸಲ ಸೀರೆ ಬದಲಿಸ್ತಿದ್ರು- ಭಾವನಾ ರಾವ್
ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ಲ್ಯಾಂಡ್ ಲಾರ್ಡ್’ ಚಿತ್ರದ ಟೀಸರ್ ಲಾಂಚ್ ಹಾಗೂ ಸುದ್ದಿಗೋಷ್ಠಿ ಯಲ್ಲಿ ಭಾವನ ಅವರು ತಮ್ಮ ಪಾತ್ರದ ಬಗ್ಗೆ ಹಂಚಿಕೊಂಡರು.
ಈ ಚಿತ್ರದಲ್ಲಿ ಭಾವನಾ ಅವರು ಪದ್ಮ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಜೊತೆಗೆ ರಾಜ್ ಬಿ ಶೆಟ್ಟಿ ಅವರಿಗೆ ಜೋಡಿ ಆಗಿ ನಟಿಸಿದ್ದಾರೆ. ಇದರ ಜೊತೆಗೆ ಈ ಪದ್ಮ ಕ್ಯಾರೆಕ್ಟರ್ ಗಾಗಿ ಒಂದು ದಿನಕ್ಕೆ 7-8 ಸೀರೆ ಚೇಂಜ್ ಮಾಡಿದ್ದೀನಿ
ಎನ್ನುವ ಮಾಹಿತಿಯನ್ನು ಭಾವನಾ ರಾವ್ ಅವರು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರ ತಂಡವು ಭಾವನಾ ಅವರು ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ನಟಿಸಿದ್ದಾರೆ ಎನ್ನುವ ವಿಚಾರವಾಗಿ ಪೋಸ್ಟರ್ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹೊರಬಿಟ್ಟಿದ್ದರು.ಪಕ್ಕ ಹಳ್ಳಿ ಹುಡುಗಿ ಲುಕ್ ಅಲ್ಲಿ ಕಾಣಿಸಿಕೊಂಡಿದ್ದರು, ಇದೀಗ ರಾಜ್ ಬಿ ಶೆಟ್ಟಿಯವರಿಗೆ ಜೋಡಿ ಆಗಿರುವುದನ್ನು ಕೇಳಿದ ಅಭಿಮಾನಿಗಳು, ಇಬ್ಬರ ಕಾಂಬಿನೇಶನ್ ಅನ್ನು ಸ್ಕ್ರೀನ್ ಮೇಲೆ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ.