ಮತ್ತೆ ಭಜರಂಗಿ – 2 ರಿಲೀಸ್ ಮುಂದೂಡಿಕೆ

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷೆಯ ಭಜರಂಗಿ-2 ಚಿತ್ರದ ಬಿಡುಗಡೆ ದಿನಾಂಕ ವನ್ನು ಮತ್ತೊಮ್ಮೆ ಮುಂದೂಡಲಾಗಿದೆ. ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ವೀಡಿಯೋ ಶೇರ್ ಮಾಡಿರುವ ಚಿತ್ರ ತಂಡ ಆದಷ್ಟು ಬೇಗ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳಿದೆ. ನಿಗದಿಯಂತೆ ಸೆಪ್ಟಂಬರ್ 10 ಕ್ಕೆ ಚಿತ್ರ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿತ್ತು ಸಿನಿಮಾ ಟ್ರೇಲರ್ ಅನ್ನು ಸೆ.1ಕ್ಕೆ ರಿಲೀಸ್ ಮಾಡುವುದಾಗಿ ತಿಳಿಸಲಾಗಿತ್ತು ಆದರೆ ಈಗ ಮುಂದೂಡಿರುವ ಬಗ್ಗೆ ಶಿವಣ್ಣ ಅವರೆ ಸ್ಪಷ್ಟನೆ ನೀಡಿದ್ದಾರೆ.

ರಿಲೀಸ್ ಮಾಡಿರುವ ವೀಡಿಯೋದಲ್ಲಿ ಖುದ್ದು ಶಿವಣ್ಣ ಮಾತನಾಡಿ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿರುವುದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಆದರೆ ಕೋವಿಡ್ ಕೇಸ್ ಗಳು ಮತ್ತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಥಿಯೇಟರ್ ಭರ್ತಿಗೆ ಅವಕಾಶ ಇಲ್ಲದಿರುವುದರಿಂದ ಸಿಸಿಮಾ ರಿಲೀಸ್ ಅನ್ನು ಮುಂದೂಡುತ್ತಿದ್ದು ಹಾಗೂ ಪ್ರೇಕ್ಷಕರಿಗೂ ಇದರಿಂದ ತೊಂದರೆ ಆಗಬಾರದು ಎಂಬ ಕಾಳಜಿಯಿಂದ ಹೀಗೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಆದಷ್ಟು ಬೇಗ ಚಿತ್ರದ ಟ್ರೇಲರ್ ರಿಲೀಸ್ ಮಾಡಲಿದ್ದು, ಅದರ ಜೊತೆಯಲ್ಲೆ ಚಿತ್ರ ಬಿಡುಗಡೆಯ ದಿನಾಂಕವನ್ನು ತಿಳಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಇದರಿಂದ ಭಜರಂಗಿ-2 ಚಿತ್ರದ ಟ್ರೇಲರ್ ಮತ್ತು ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಎ.ಹರ್ಷ ನಿರ್ದೇಶನದ ಭಜರಂಗಿ 2 ಸಿನಿಮಾದ ಮೇಲೆ ಚಿತ್ರರಂಗವೂ ಭಾರಿ ನಿರೀಕ್ಷೆ ಹೊಂದಿದೆ.
****