News

ಯಶ್ ನ್ಯಾಷನಲ್ ಸ್ಟಾರ್: ಶಿವಣ್ಣನ ಮೆಚ್ಚುಗೆ ಮಾತು

ಯಶ್ ನ್ಯಾಷನಲ್ ಸ್ಟಾರ್: ಶಿವಣ್ಣನ ಮೆಚ್ಚುಗೆ ಮಾತು
  • PublishedOctober 27, 2021

ಭಜರಂಗಿ 2’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಅಕ್ಟೋಬರ್ 29ರಂದು ಚಿತ್ರ ತೆರೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ ನಟ ಯಶ್ ಹಾಗೂ ಪುನೀತ್ ರಾಜಕುಮಾರ್ ಅತಿಥಿಗಳಾಗಿ ಆಗಮಿಸಿದ್ದರು.

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡಿ ಹೊಗಳಿದ್ದಾರೆ. ಪ್ರಿ ರಿಲೀಸ್ ಈವೆಂಟ್ ಗೆ ಅತಿಥಿಯಾಗಿ ಬಂದಿದ್ದ ರಾಕಿಂಗ್ ಸ್ಟಾರ್ ಯಶ್, ಸಿನಿಮಾಗೆ ಶುಭ ಕೋರಿದ್ದಲ್ಲದೆ, ನಾನು ಹುಟ್ಟಿದಾಗಲೇ ಶಿವಣ್ಣ ಸ್ಟಾರ್ ಆಗಿದ್ರು. ಶಿವಣ್ಣ, ಅಪ್ಪು ಸಾರ್ ನೋಡಿ ನಾವೆಲ್ಲಾ ಸ್ಪೂರ್ತಿ ಪಡೆದಿದ್ದೇವೆ ಎಂದು ಯಶ್ ಹೊಗಳಿದರು.


ಬಳಿಕ ಮಾತನಾಡಿದ ಶಿವಣ್ಣ ‘ಯಶ್ ನನ್ನ ಫ್ಯಾನ್ ಎಂದರು. ಆದರೆ ನಾನು ಯಶ್ ಬಗ್ಗೆ ಹೇಳಲೇಬೇಕು. ಈವತ್ತು ನ್ಯಾಷನಲ್ ಸ್ಟಾರ್ ಆದ್ರೂ ಅದೇ ವಿನಯವಂತಿಕೆ ಉಳಿಸಿಕೊಂಡಿದ್ದಾರೆ. ಮೊದಲು ಹೇಗಿದ್ದರೋ ಹಾಗೇ ಇದ್ದಾರೆ’ ಎಂದಿದ್ದಾರೆ. ಇದೇ ವೇಳೆ ಅವರು ಯಶ್ ಬಗ್ಗೆ ಎಷ್ಟು ಹೇಳಿದರೂ ಸಾಕಾಗುವುದಿಲ್ಲ. ಒಳ್ಳೆಯ ಧನಾತ್ಮಕ ವ್ಯಕ್ತಿತ್ವ ಇರುವ ವ್ಯಕ್ತಿ ಯಶ್ ಎಂದಿದ್ದಾರೆ ಶಿವಣ್ಣ. ಯಶ್‍ ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಅವರು ತುಂಬಾ ಹ್ಯಾಂಡ್ಸಮ್’ ಎಂದು ಶಿವಣ್ಣ ಹೊಗಳಿದ್ದಾರೆ. ಪ್ರಿರಿಲೀಸ್ ಈವೆಂಟ್ ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯಶ್, ಶಿವಣ್ಣ ಜೊತೆಯಾಗಿ ಭಜರಂಗಿ 2 ಟೈಟಲ್ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳಿಗೆ ಖುಷಿಕೊಟ್ಟರು.

‘ಭಜರಂಗಿ 2’ ಚಿತ್ರವನ್ನು ಎ.ಹರ್ಷ ನಿರ್ದೇಶಿಸಿದ್ದು, ಶಿವರಾಜಕುಮಾರ್ ಹಾಗೂ ಎ.ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದೆ. ಚಿತ್ರದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ನೀಡಿದ್ದು, ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನ ಚಿಯತ್ರಕ್ಕಿದೆ. ಅಕ್ಟೋಬರ್ 29ರಂದು ಸುಮಾರು 1,000 ಚಿತ್ರಮಂದಿರಗಳಲ್ಲಿ ‘ಭಜರಂಗಿ 2’ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಗಾಂಧಿನಗರ ಅಂಗಳದಿಂದ ಕೇಳಿಬಂದಿದೆ.

Written By
Kannadapichhar

Leave a Reply

Your email address will not be published. Required fields are marked *