ಬಡವ ರಾಸ್ಕಲ್ ಪ್ರಿಮಿಯರ್ ಶೋ ಮೈಸೂರಲ್ಲಿ ಯಾಕೆ..?
ಡಾಲಿ ಧನಂಜಯ್ ಅಭಿನಯಿಸಿ, ತಾವೆ ಡಾಲಿ ಪಿಚ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಿಸಿರುವ ಬಡವ ರಾಸ್ಕಲ್ ಚಿತ್ರದ ಪ್ರಿಮಿಯರ್ ಶೋ ಇಂದು ಸಂಜೆ ಮೈಸೂರಿನಲ್ಲಿ ನಡೆಯುತ್ತಿದೆ. ಮೈಸೂರಿನ ಡಿ ಆರ್ ಸಿ ಸಿನಿಮಾಸ್ ನಲ್ಲಿ ನಡೆಯುತ್ತಿರು ಪ್ರಿಮಿಯರ್ ಶೋಗೆ ಬಡವ ರಾಸ್ಕಲ್ ನ ಇಡೀ ಚಿತ್ರತಂಡ ಭಾಗವಹಿಸುತ್ತಿದೆ.
ಬೆಂಗಳೂರಿನಲ್ಲಿ ಪ್ರಿಮಿಯರ್ ಸಾಮಾನ್ಯ ಆದರೆ ಬಡವ ರಾಸ್ಕಲ್ ಪ್ರಿಮಿಯರ್ ಶೋ ಮೈಸೂರಲ್ಲಿ ಯಾಕೆ? ಎಂಬ ಪ್ರಶ್ನೆಗೆ ಡಾಲಿ ಉತ್ತರಿಸಿದ್ದಾರೆ, ನಮ್ಮ ಕನಸುಗಳನ್ನು ಬಿತ್ತಲು ಕಾರಣವಾಗಿದ್ದು ಮೂಸೂರು. ಪ್ರತಿಯೊಬ್ಬರಿಗೂ ಮೈಸೂರು ಎಂದರೆ ಭಾವನಾತ್ಮಕ ಸಂಬಂಧ ಇದೆ ನಾನು ಯಾವಾಗ ಮೈಸೂರಿಗೆ ಬಂದ್ರು ವಾಪಸ್ ಬರಲು ಬೇಜಾರಾಗತ್ತಿ ಅಲ್ಲೆ ಉಳಿಬೇಕು ಅನ್ಸತ್ತೆ, ನಮ್ಮ ಮೊದಲ ಸಿನಿಮಾ ಡೈರೆಕ್ಟರ್ಸ್ ಸ್ಪೆಷಲ್ ಇಂದ ಸಲಗ ವರೆಗೂ ನನ್ನ ಸಿನಿಮಾಗಳಿಗೆ ಹೆಚ್ಚಿನ ಪ್ರೀತಿ ತೋರಿದ್ದಾರೆ. ಹಾಗಾಗಿ ನನ್ನ ಮೊದಲ ನಿರ್ಮಾಣದ ಸಿನಿಮಾ ಅವರ ಮದ್ಯದಲ್ಲೆ ಶೋ ನಡಿಬೇಕು ಎಂದು ಪ್ರೀತಿಯಿಂದ ಮಾಡ್ತಿದ್ದೀವಿ ಎಂದರು
ಬಡವ ರಾಸ್ಕಲ್ ಚಿತ್ರ ಬಿಡುಗಡೆಗೆ ಇನ್ನು ಒಂದೇ ದಿನ ಬಾಕಿ ಇದ್ದು (ಡಿ.24) ಚಿತ್ರ ತಂಡ ಸಿನಿಮಾ ಬಿಡುಗಡೆಗೆ ಸಕಲ ಸಿದ್ದತೆ ಮಾಡಿಕೊಂಡಿದೆ. ಕಳೆದ 20 ದಿನಗಳಿಂದ ಚಿತ್ರದ ಪ್ರಚಾರವನ್ನು ವಿಭಿನ್ನವಾಗಿ ಮಾಡಿದ ಡಾಲಿ ಆಂಡ್ ಟೀಮ್ ಇಂದು ಶ್ರೀ ಬಂಡೆ ಮಹಾಂಕಾಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.