ಮದುವೆ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ಹಾಗೂ ಅಮೃತ ಅಯ್ಯಂಗಾರ್
ಲವ್ ಮಾಕ್ಟೈಲ್ ನಟಿಗೆ ಮದುವೆಯ ಸಂಭ್ರಮ
ಸ್ಯಾಂಡಲ್‌ವುಡ್ ನ ಸಾಕಷ್ಟು ಸ್ಟಾರ್‌ಗಳು ಈ ಕೊರೋನಾ ಸಮಯದಲ್ಲೇ ಸೈಲೆಂಟ್ ಆಗಿ ಮದ್ವೆ ಆದ್ರು…ಈಗ ನಟಿ ಆಶಿಕಾ ರಂಗನಾಥ್ ಹಾಗೂ ಅಮೃತಾ ಅಯ್ಯರ್ ಮದುವೆ ಸಂಭ್ರಮದಲ್ಲಿದ್ದಾರೆ ಹಾಗಂತ ಇವರಿಬ್ಬರ ಮದುವೆ ಅಲ್ಲ..

ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಯೊಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ ….

ರಿಕ್ತ ಹಾಗೂ ಲವ್ ಮಾಕ್ಟೈಲ್ 2 ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಯವಾಗಿರುವ ನಟಿ ಸುಶ್ಮಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದಾರೆ…

ಈಗಾಗಲೇ ಮದುವೆ ತಯಾರಿಗಳು ನಡೆದಿದ್ದು ಮೆಹೆಂದಿ,ಸಂಗೀತ್ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿದೆ…ಸುಷ್ಮಿತಾ ಗೌಡ ಮದುವೆ ಸಂಭ್ರಮದಲ್ಲಿ ನಟಿ ಆಶಿಕಾ ರಂಗನಾಥ್ ಅಮೃತಾ ಅಯ್ಯರ್ ಹಾಗೂ ಮಿಲನ ನಾಗರಾಜ್ ಭಾಗಿಯಾಗಿದ್ದಾರೆ …

ಬೆಂಗಳೂರಿನ ಮೂಲದ ವಾಷಿಂಗ್ಟನ್ ನಲ್ಲಿ ಡಿಸಿ ಆಗಿ ಕಾರ್ಯನಿರ್ವಹಿಸುತ್ತಿರುವ ಅಶ್ವಿನ್ ಅವರ ಜೊತೆ ಸುಷ್ಮಿತಾ ಗೌಡ ಸಪ್ತಪದಿ ತುಳಿಯುತ್ತಿದ್ದಾರೆ …

ನಟಿಯಾಗಿರುವ ಜೊತೆಗೆ ತಮ್ಮದೇ ಆದ ಸಂಸ್ಥೆಗಳನ್ನು ಹೊಂದಿದ್ದಾರೆ ಸುಷ್ಮಿತಾ ಗೌಡ… ಇನ್ನೂ ಸೋಷಿಯಲ್ ಮೀಡಿಯಾದಲ್ಲಿ _ಹೇರ್ ಟಿಪ್ಸ್ .ಸ್ಕಿನ್ ಟಿಪ್ಸ್ .ರೀಲ್ ಗಳನ್ನು ಮಾಡುವ ಮೂಲಕ ಸಾಕಷ್ಟು ಪ್ರಖ್ಯಾತಿ ಹೊಂದಿದ್ದಾರೆ