ಕಿಚ್ಚನ ಬಳಿ ಕ್ಷಮೆ ಕೇಳಿದ ಆರ್ಯವರ್ಧನ್ ಗುರೂಜಿ
ನಂಬರ್ ಅಂದ್ರೆ ನಾನು ನಾನು ಅಂದ್ರೆ ನಂಬರ್ ಎಂದೇ ಫೇಮಸ್ ಆಗಿರೋ ವ್ಯಕ್ತಿ ಆರ್ಯವರ್ಧನ್ ಗುರೂಜಿ. ಸಂಖ್ಯಾ ಶಾಸ್ತ್ರಜ್ಞ ಎನ್ನುವ ಇವರು ಪ್ರತಿ ಬಾರಿ ಯಾವುದಾದ್ರೂ ಒಂದು ವಾದ ವಿವಾದದವನ್ನ ಮಾಡ್ಕೋತಾನೆ ಇರ್ತಾರೆ.ಈ ಬಾರಿ ತಮ್ಮ ಮಾತುಗಳಿಂದ ಸುದೀಪ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಶ್ವವೇಗ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮಕರ ರಾಶಿಯವರ 2026 ರ ಭವಿಷ್ಯದ ಬಗ್ಗೆ ಮೀತಾ ಕ್ರಿಸ್ಟಲ್ ಸಂಖ್ಯಾ ಶಾಸ್ತ್ರಜ್ಞೆ ಅವರ ಜೊತೆಗೂಡಿ ಸಂಖ್ಯಾ ಶಾಸ್ತ್ರ ಹೇಳುವ ಸಂದರ್ಭದಲ್ಲಿ ಆದಿರುವ ಮಾತು ಬಾರಿ ಚರ್ಚೆಗೆ ಗ್ರಾಸ್ತವಾಗಿತ್ತು.ಮಕರ ರಾಶಿಯವರ ಕುರಿತು ಮಾತನಾಡುವಾಗ ಮಕರ ರಾಶಿಯವರು ” ದರ್ಶನ್ ಅವ್ರು ಜೈಲಿಗೆ ಹೋದ್ಮೇಲೆ ಸುದೀಪ್ ನಿಗಾರಾಡ್ತವ್ರೆ, ಪ್ಯಾಂಟ್ ಬಿಚ್ಚಿ ತೋರ್ಸಲಾ”ಅಂತಿದ್ದಾರೆ ಎಂದು ಸ್ಟೇಟ್ ಮೆಂಟ್ ಪಾಸ್ ಮಾಡಿದ್ದರು.ಇದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಇದೀಗ ಆರ್ಯವರ್ಧನ್ ಅವರು ತಮ್ಮ ತಪ್ಪನ್ನು ತಿಳಿದ ಕೂಡಲೇ “ಮಾತಿನ ಭರದಲ್ಲಿ ಏನೋ ಮಾತನಾಡಿಬಿಟ್ಟೆ. ಅದರಿಂದ ಸುದೀಪ್ ಸರ್ ಗೆ ಹಾಗೂ ಅವರ ಫ್ಯಾನ್ಸ್ಗಳಿಗೆ ನೋವಾಗಿದ್ದಾರೆ ನಾನು ಕ್ಷಮೆ ಕೇಳ್ತೀನಿ” ಎಂದು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾರೆ.