new updates News ಪಿಚ್ಚರ್ stories ಪಿಚ್ಚರ್ UPDATE

ಆಕಾಶ್ ರೀ ರಿಲೀಸ್ಅಪ್ಪು ಹುಟ್ಟುಹಬ್ಬಕ್ಕೆ ದೊಡ್ಡಹಬ್ಬ

ಆಕಾಶ್ ರೀ ರಿಲೀಸ್ಅಪ್ಪು ಹುಟ್ಟುಹಬ್ಬಕ್ಕೆ ದೊಡ್ಡಹಬ್ಬ
  • PublishedJanuary 4, 2026


ಅಪ್ಪು ನಮ್ಮನ್ನ ಅಗಲಿ ವರ್ಷಗಳೇ ಕಳೆದರೂ ಅಭಿಮಾನಿಗಳ ಮನಸ್ಸುಗಳಲ್ಲಿ ಚಿರಶಾಶ್ವತ ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ದಿನವೂ ಅಪ್ಪು ಫೋಟೋ, ವಿಡಿಯೋ, ಸಿನಿಮಾ ದೃಶ್ಯಗಳು, ಅಪ್ಪು ಬಗೆಗಿನ ಪೋಸ್ಟ್​​ಗಳು ಹರಿದಾಡುತ್ತಲೇ ಇರುತ್ತವೆ. ಟಿವಿಗಳಲ್ಲಿ ಅಪ್ಪು ಅವರ ಸಿನಿಮಾಗಳು ಬರುತ್ತಲೇ ಇರುತ್ತವೆ. ಒಟಿಟಿಗಳಲ್ಲಿಯೂ ಅಪ್ಪು ಅವರ ಸಿನಿಮಾಗಳಿಗೆ ಈಗಲೂ ಹೆಚ್ಚು ಬೇಡಿಕೆ ಇದೆ.. ಇದೀಗ ಅಪ್ಪು ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ಒಂದು ರೀ ರಿಲೀಸ್ ಆಗ್ತಿದೆ..

ಹೌದು.. ಪುನೀತ್ ನಾಯಕನಾಗಿ ನಟಿಸಿದ 5ನೇ ಸಿನಿಮಾ ಆಕಾಶ್ ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ರೀ ರಿಲೀಸ್ ಆಗುತ್ತಿದೆ. 2005 ರಲ್ಲಿ ಬಿಡುಗಡೆ ಆಗಿದ್ದ ಆಕಾಶ್ ಸಿನಿಮಾ ಇದೀಗ 20 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ. ಮಾರ್ಚ್ 13 ರಂದು ಆಕಾಶ್ ಸಿನಿಮಾ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರಮುಖ ನಗರಗಳಲ್ಲಿ ಆಯ್ದ ಚಿತ್ರಮಂದಿರಗಳಲ್ಲಿ ಮತ್ತೆ ಪ್ರದರ್ಶನ ಕಾಣಲಿದೆ.
2005 ರಲ್ಲಿ ಬಿಡುಗಡೆ ಆಗಿದ್ದ ಆಕಾಶ್ ಸಿನಿಮಾ ಆಗಿನ ಕಾಲದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದಾಗಿತ್ತು. 200 ದಿನಗಳ ಕಾಲ ಸಹ ಪ್ರದರ್ಶನ ಕಂಡಿತ್ತು ಸಿನಿಮಾ. ಆಕಾಶ್ ಹೆಸರಿನ ಹುಡುಗ ಸರಳ, ಮಧ್ಯಮ ವರ್ಗದ ಯುವಕನ ಪಾತ್ರದಲ್ಲಿ ಪುನೀತ್ ರಾಜ್​​ಕುಮಾರ್ ನಟಿಸಿದ್ದರು. ಸಿನಿಮಾದ ನಾಯಕಿಯಾಗಿ ನಟಿಸಿದ್ದು ನಟಿ ರಮ್ಯಾ. ಆಕಾಶ್ ಸಿನಿಮಾದ ಎಲ್ಲ ಹಾಡುಗಳು ಅಭಿಮಾನಿಗಳ ಮನಸ್ಸನ್ನ ಗೆದ್ದಿದ್ದು ಅದರಲ್ಲಿ ನೀನೆ ನೀನೆ ಮನಸೆಲ್ಲ ನೀನೆ ಹಾಡು ಇಂದಿಗೂ ಕನ್ನಡದ ಜನಪ್ರಿಯ ಹಾಡುಗಳಲ್ಲಿ ಒಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೆಟ್ ಮಾಡಿದೆ

ಇನ್ನೂ.. ಮಾರ್ಚ್ 17ರಂದು ಪುನೀತ್ ರಾಜ್​ಕುಮಾರ್ ಅವರ ಜನ್ಮದಿನ. ಮುಂಚಿತವಾಗಿ ಅಂದರೆ ಮಾರ್ಚ್ 13ರಂದೇ ಆಕಾಶ್ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದೆ. ಪಿಆರ್​​ಕೆ ಪ್ರೊಡಕ್ಷನ್ಸ್ ವತಿಯಿಂದ ಆಕಾಶ್ ಸಿನಿಮಾ ಮರು ಬಿಡುಗಡೆ ಮಾಡಲಾಗುತ್ತಿದ್ದು, ರೀ ರಿಲೀಸ್ ಪೋಸ್ಟರ್ ಅನ್ನು ರಾಘವೇಂದ್ರ ರಾಜ್​ಕುಮಾರ್, ಪಿಆರ್​​ಕೆ ಪ್ರೊಡಕ್ಷನ್ ಇನ್ನಿತರರು ಹಂಚಿಕೊಂಡಿದ್ದಾರೆ. ನಟಿ ರಮ್ಯಾ ಸಹ ಆಕಾಶ್ ಸಿನಿಮಾ ಮರು ಬಿಡುಗಡೆಗೆ ಪ್ರಚಾರ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಾಯಿದೆ..

ಒಟ್ನಲ್ಲಿ.. ಎಲ್ಲವೂ ಚನ್ನಾಗಿ ಇದ್ದಿದ್ರೆ ಇಷ್ಟೋತ್ತಿಗಾಗಲೇ ಅಪ್ಪುರವರ ಅದೆಷ್ಟು ಸಿನಿಮಾಗಳು ಸೆಟ್ಟೆರ್ತಾಯಿತ್ತೋ, ಏನಿ ನೇ ಆಕಾಶ್ ರಿ ರೀಲಿಸ್ ಆಗ್ತಾಯಿದ್ದು ಫ್ಯಾನ್ಸ್ ಬೆಳ್ಳಿಪರದೆ ಮೇಲೆ ಅಪ್ಪುರನ್ನ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ..

Written By
Kannada Picchar

Leave a Reply

Your email address will not be published. Required fields are marked *