ನ್ಯೂ-ಯಾರ್ಕ್ ನಲ್ಲಿ ಹೊಸ ವರ್ಷ ಬರ ಮಾಡಿಕೊಂಡ ಅಪ್ಪು ಕುಟುಂಬ
ಪುನೀತ್ ರಾಜ್ ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹಿರಿಯ ಮಗಳಾದ ಧೃತಿ ಪುನೀತ್ ರಾಜ್ ಕುಮಾರ್ ಅವರು ನ್ಯೂ ಯಾರ್ಕ್ ನಲ್ಲಿ ಫ್ಯಾಷನ್ ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್ ನಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಸದ್ಯಕ್ಕೆ ಅಲ್ಲಿಯೇ ವಾಸವಾಗಿರುವ ಧೃತಿ ಪುನೀತ್ ರಾಜ್ ಕುಮಾರ್ ಅವರನ್ನು ಕಾಣಲು ಅಶ್ವಿನಿ ಪುನೀತ್ ರಾಜಕುಮಾರ್ ಹಾಗೂ ತಂಗಿ ವಂದಿತಾ ಪುನೀತ್ ರಾಜ್ ಕುಮಾರ್ ಆಗಾಗ ಹೋಗಿ ಬರುತ್ತಾರೆ. ಹಾಗಾಗಿ ಈ ವರ್ಷ ಹೊಸ ವರ್ಷವನ್ನು ಅವರು ನ್ಯೂ ಯಾರ್ಕ್ ನಲ್ಲೆ ಆಚರಿಸಿದ್ದಾರೆ.