ಸೈತಾನ್ ಆಗ್ತಾರಂತೆ ನಿರೂಪಕಿ ಅನುಶ್ರೀ

ಕನ್ನಡ ಕಿರುತೆರೆಯ ನಂಬರ್ ಒನ್ ನಿರೂಪಕಿಯಾಗಿರುವ ಅನುಶ್ರೀ ಮತ್ತೆ ಸಿನಿಮಾರಂಗದತ್ತ ಮುಖ ಮಾಡಿದ್ದಾರೆ… ಈಗಾಗಲೇ ಬೆಂಕಿಪಟ್ಟಣ, ಉಪ್ಪು ಹುಳಿ ಖಾರ ಸಿನಿಮಾದ ಮೂಲಕ ಪ್ರೇಕ್ಷಕರ ಮನಸ್ಸು ಮುಟ್ಟಿದ ಅನುಶ್ರೀ ಮತ್ತೆ ಬಿಗ್ ಸ್ಕ್ರೀನ್ ಮೇಲೆ ಅಭಿನಯಿಸಲು ಸಿದ್ಧರಾಗಿದ್ದಾರೆ
ಉಪ್ಪು ಹುಳಿ ಖಾರ ಹಾಗೂ ಬೆಂಕಿಪಟ್ಣ ಸಿನಿಮಾದಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನು ನಿರ್ವಹಿಸಿದ ಅನುಶ್ರೀ ಇದೇ ಮೊಟ್ಟ ಮೊದಲ ಬಾರಿಗೆ ಹಾರರ್ ಚಿತ್ರದಲ್ಲಿ ಅಭಿನಯಿಸಲು ನಿರ್ಧರಿಸಿದ್ದಾರೆ …ಹೌದು ಅನುಶ್ರೀ ಅಭಿನಯದ ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗಷ್ಟೇ ನಡೆದಿದ್ದು ಚಿತ್ರಕ್ಕೆ ಸೈತಾನ್ ಎಂದು ಹೆಸರಿಡಲಾಗಿದೆ …ಎಸ್ ಎಂ ಪಿ ಪ್ರೊಡಕ್ಷನ್ಸ್ ಹಾಗೂ ಲೋಹಿತ್ ಹೆಚ್ ಪ್ರೊಡಕ್ಷನ್ ನಲ್ಲಿ ಸೈತಾನ್ ಸಿನಿಮಾ ನಿರ್ಮಾಣ ಆಗುತ್ತಿದೆ


ಸೈತಾನ್ ಸಿನಿಮಾವನ್ನ ಪ್ರಭಾಕರ್ ನಿರ್ದೇಶನ ಮಾಡುತ್ತಿದ್ದು ಇತ್ತೀಚೆಗಷ್ಟೇ ಸಿನಿಮಾತಂಡ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿತ್ತು ..ಸದ್ಯ ಟೈಟಲ್ ರಿವಿಲ್ ಮಾಡಿರೋ ಸಿನಿಮಾ ಟೀಂ ಆದಷ್ಟು ಬೇಗ ಚಿತ್ರೀಕರಣವನ್ನ ಶುರು ಮಾಡಲಿದೆ ..ಸೈತಾನ್ ಮಹಿಳಾ ಪ್ರಧಾನ ಚಿತ್ರವಾಗಿದ್ದು ಕಂಪ್ಲಿಟ್ ಹಾರರ್ ಥ್ರಿಲ್ಲರ್ ಚಿತ್ರದ ಮೂಲಕ ಅನುಶ್ರೀ ಈ ಬಾರಿ ಪ್ರೇಕ್ಷಕರ ಎದುರು ಬರಲಿದ್ದಾರೆ …