36 ವರ್ಷಗಳ ಬಳಿಕ ನನಸಾಯಿತು ಕಿಚ್ಚನ ಕನಸು..!
ಸ್ಯಾಂಡಲ್ ವುಡ್ ನಅಭಿನಯ ಚಕ್ರವರ್ತಿಗೆ ಕ್ರಿಕೆಟ್ ಅಂದರೆ ಅಷ್ಟು ಅಚ್ಚುಮೆಚ್ಚು. ಈಗಲೂ ಕ್ರಿಕೆಟ್ ಆಡುತ್ತಿರುತ್ತಾರೆ. ಸಿಸಿಎಲ್ ಪಂದ್ಯಾವಳಿ ಸೇರಿದಂತೆ ಅನೇಕ ಬಾರಿ ಅವರು ಬ್ಯಾಟ್ ಬೀಸಿದ್ದಾರೆ. ಕಿಚ್ಚ ಸುದೀಪ್ರವರು ಒಳ್ಳೆಯ ಬ್ಯಾಟ್ಸ್ಮ್ಯಾನ್ ಹಾಗೂ ವಿಕೆಟ್ ಕೀಪರ್ ಎಂಬುಂದು ಎಲ್ಲರಿಗೂ ಗೊತ್ತಿದೆ. 1983ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ‘83’ ಸಿನಿಮಾ ತಯಾರಾಗಿದೆ. ಆ ಸಿನಿಮಾವನ್ನು ಕರ್ನಾಟಕದಲ್ಲಿ ಕಿಚ್ಚ ಸುದೀಪ್ ಪ್ರಸ್ತುತಪಡಿಸುತ್ತಿದ್ದಾರೆ. ‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ಮಾಡಿದ್ದಾರೆ. ಕಪಿಲ್ ದೇವ್ ಎಂದರೆ ಸುದೀಪ್ ಅವರಿಗೆ ಸಖತ್ ಅಭಿಮಾನ. ಅವರ ಜತೆ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಬಾಲ್ಯದಲ್ಲೇ ಸುದೀಪ್ ಅವರ ಮನದಲ್ಲಿ ಚಿಗುರಿತ್ತು. ಆದರೆ ಸಾಧ್ಯವಾಗಿರಲಿಲ್ಲ, 36 ವರ್ಷಗಳ ಬಳಿಕ ಆ ಕ್ಷಣ ಬಂತು ಎಂದು ಸುದೀಪ್ ಪೋಟೋವೊಂದನ್ನು ಹಂಚಿಕೊಂಡಿದ್ದಾರೆ.
ನಿನ್ನೆ (ಡಿ.18) 83 ಚಿತ್ರತಂಡ ಬೆಂಗಳೂರಿನಲ್ಲಿ ಜಬರ್ ದಸ್ತ್ ಪ್ರಚಾರ ಮಾಡಿದೆ. ಒಂದೇ ವೇದಿಕೆಯಲ್ಲಿ ಘಟಾನುಘಟಿ ದಿಗ್ಗಜರ ಸಮಾಗಮವಾಗಿದೆ. ಕಿಚ್ಚ ಸುದೀಪ್ ರಣವೀರ್ ಸಿಂಗ್, ಕಪೀಲ್ ದೇವ್ ಸೇರಿ ಹಲವು ಕ್ರಿಕೆಟ್ ದಿಗ್ಗಜರ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು. ರಣವೀರ್ ಸಿಂಗ್ ಇದಾರೆ ಅಂದರೆ ಅಲ್ಲಿ ಮನರಂಜನೆಗೆ ಕೊರತೆ ಇಲ್ಲ. ಜೊತೆಗೆ ಕಿಚ್ಚ ಸುದೀಪ್ ಸೇರಿದ್ದಾರೆ ಅಂದರೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ. ಬೆಂಗಳೂರಿನಲ್ಲಿ ನಡೆದ 83 ಸಿನಿಮಾ ಪ್ರಚಾರ ಸಖತ್ ಥ್ರಿಲ್ ಆಗಿತ್ತು. ಇದೇ ವೇಳೆ ಕಪಿಲ್ ದೇವ್ ಜೊತೆ ಕಿಚ್ಚ ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋವನ್ನು ಇದೀಗ ಅಪ್ ಲೋಡ್ ಮಾಡಿದ್ದಾರೆ.
****