ಪಿಚ್ಚರ್ EXCLUSIVE

Exclusive : ಅದಿತಿ ಪ್ರಭುದೇವಾ ಮದುವೆ ಡೇಟ್‌ ಫಿಕ್ಸ್‌

Exclusive : ಅದಿತಿ ಪ್ರಭುದೇವಾ ಮದುವೆ ಡೇಟ್‌ ಫಿಕ್ಸ್‌
  • PublishedNovember 3, 2022

ಸ್ಯಾಂಡಲ್‌ ವುಡ್‌ ನ ಮುದ್ದು ಹುಡುಗಿ, ಪ್ರತಿ ಪ್ರೇಕ್ಷಕನಿಗೂ ನಮ್‌ ಮನೆ ಹುಡುಗಿ ಅನ್ನೋ ಫೀಲ್‌ ಕೊಡೋ ನಟಿ ಅದಿತಿ ಪ್ರಭುದೇವ…ಸಾಲು ಸಾಲು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರ ಮನೆ ಮಾತಾಗಿರೋ ಅದಿತಿ ಈಗ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ…ಸೈಲೆಂಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದ ಅದಿತಿ ಈಗ ಮದುವೆ ಡೇಟ್‌ ಫಿಕ್ಸ್‌ ಮಾಡಿಕೊಂಡು ಪತ್ರಿಕೆ ಹಂಚುತ್ತಿದ್ದಾರೆ….

ಯೆಸ್‌ ಅದಿತಿ, ಯಶಸ್ವಿ ಅವ್ರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಹಳೆ ವಿಚಾರ.. ಈಗ ಅದಿತಿ ಮತ್ತು ಯಶಸ್ವಿ ಮದುವೆಗೆ ಡೇಟ್‌ ಫಿಕ್ಸ್‌ ಆಗಿದೆ…ಇದೇ ತಿಂಗಳು ಅಂದರೆ ನವೆಂಬರ್‌ 27 ಹಾಗೂ 28ರಂದು ಯಶಸ್ವಿ ಜೊತೆ ಅದಿತಿ ಸಪ್ತಪದಿ ತುಳಿಯುತ್ತಿದ್ದಾರೆ…ಬೆಂಗಳೂರಿನ ಪ್ಯಾಲೆಸ್‌ ಗ್ರ್ಯಾಂಡ್‌ ನಲ್ಲಿ ಅದಿತಿ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ…

ಯಶಸ್ ಕೊಡಗಿನ ಮೂಲದವರಾಗಿದ್ದು ಕಾಫಿ ಎಸ್ಟೇಟ್‌ನ ಮಾಲೀಕ ಹಾಗೂ ಬ್ಯುಸಿನೆಸ್‌ಮ್ಯಾನ್ ಆಗಿದ್ದಾರೆ. ಪಕ್ಕ ಕನ್ನಡ ಹುಡುಗನನ್ನೇ ಮದುವೆ ಆಗುತ್ತಿನಿ ಎಂದಿದ್ದ ಅಧಿತಿ ಈಗ ಕೊಡಗಿನ ಹುಡುಗನ ಜೊತೆ ದಾಂಪತ್ಯ ಜೀವನ ಶುರು ಮಾಡುವುದರ ಮೂಲಕ ಹೇಳಿದಂತೆ ನಡೆದುಕೊಳ್ತಿದ್ದಾರೆ….

Written By
Kannadapichhar