News

ಅದಿತಿ ಪ್ರಭುದೇವ್ ಇನ್ನು ತನಿಖಾಧಿಕಾರಿ..!

ಅದಿತಿ ಪ್ರಭುದೇವ್ ಇನ್ನು ತನಿಖಾಧಿಕಾರಿ..!
  • PublishedOctober 25, 2021

ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ ನಟನೆಯ ಹೊಸ ಚಿತ್ರದ ಮುಹೂರ್ತ ಅರಮನೆ ನಗರಿ ಮೈಸೂರಿನ ಕೋಟೆ ವಿನಾಯಕ ದೇವಸ್ಥಾನದಲ್ಲಿ ಭಾನುವಾರ (ಅ.24) ನೆರವೇರಿದೆ.

ಪವನ್ ತೇಜ್ ಹಾಗೂ ಅದಿತಿ ಪ್ರಭುದೇವ ನಾಯಕ ನಾಯಕಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರವನ್ನು ಉದ್ಯಮಿ ವಿ.ಚಂದ್ರು ನಿರ್ಮಿಸಲಿದ್ದಾರೆ. ಹಾಗೂ ನವ ನಿರ್ದೇಶಕ ಜೀವ ನಿರ್ದೇಶಿಸಲಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ನಿರ್ಮಾಪಕ ವಿ.ಚಂದ್ರು ಆಕ್ಷನ್ ಹೇಳಿ ಚಾಲನೆ ನೀಡಿದ್ದು, ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಕ್ಯಾಮೆರಾಗೆ ಚಾಲನೆ ನೀಡಿದರು.

ಈ ಚಿತ್ರದ ಕಥೆ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ನಾಯಕ ಪವನ್ ತೇಜ್ ಹಾಗೂ ನಾಯಕಿ ಅದಿತಿ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅದಿತಿ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

“ನಿರ್ದೇಶಕ ಜೀವ ಅವರು ಹೇಳಿದ ಕಥೆ ಇಷ್ಟವಾಯಿತು. ಒಂದೇ ಹಂತದಲ್ಲಿ ಈ ಚಿತ್ರೀಕರಣ ನಡೆಯಲಿದೆ. ಹಿಂದೆಯಿಂದಲೂ ನನಗೆ ಇಂತಹ ಪಾತ್ರಗಳಲ್ಲಿ ನಟನೆ ಮಾಡಬೇಕೆಂದು ಆಸೆಯಿತ್ತು. ಈ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಲು ಖುಷಿಯಿದೆ” ಎಂದು ಅದಿತಿ ಪ್ರಭುದೇವ ಹೇಳಿದ್ದಾರೆ. ಈ ಚಿತ್ರದ ಟೈಟಲ್ ಇನ್ನೂ ನಿಗದಿ ಆಗಿಲ್ಲ, ಚಿತ್ರತಂಡ ಆದಷ್ಟು ಬೇಗ ರಿವೀಲ್ ಮಾಡಲಿದೆ. ಸಿನಿಮಾದ ಶೂಟಿಂಗ್ 45 ದಿನ ನಡೆಯಲಿದ್ದು, ಒಂದೇ ಹಂತದ ಚಿತ್ರೀಕರಣ ಮಾಡಲು ತಂಡ ತಯಾರಿ ನಡೆಸಿದೆ.

ಮೈಸೂರು, ರಾಜಸ್ಥಾನ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ಪ್ರವೀಣ್ ಅವರ ಸಂಗೀತ ನಿರ್ದೇಶನದ ನಾಲ್ಕು ಹಾಡುಗಳು ಚಿತ್ರದಲ್ಲಿ ಇರಲಿದೆ. ಈ ಚಿತ್ರದಲ್ಲಿ ಮೇಘಶ್ರೀ, ನಾಗಾರ್ಜುನ, ಹನುಮಂತೇಗೌಡ, ರಂಜಿತ್, ನವೀನ್ ಪಡೀಲ್ ಹಾಗೂ ಸಾಕಷ್ಟು ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *