ಅಂಬಿ ನೆಚ್ಚಿನ ತಾರಮ್ಮ ಬ್ಯಾಡ್ ಮ್ಯಾನರ್ಸ್ ನಲ್ಲಿ

ರಾಷ್ಟ್ರ ಪ್ರಶಸ್ತಿ ವಿಜೇತೆ, ನಟಿ, ಶ್ರೀಮತಿ ತಾರಾಅನುರಾಧ ಬ್ಯಾಡ್ ಮ್ಯಾನರ್ಸ್ ಟೀಮ್ ಸೇರಿಕೊಂಡಿದ್ದಾರೆ. ತಾರಾ ನೆಚ್ಚಿನ ನಾಯಕ ಅಂಬರೀಷ್ ಅವರೊಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದೆ. ಈಗ ಅಂಬಿ ಪುತ್ರನೊಂದಿಗೆ ತೆರೆಯನ್ನ ಹಂಚಿಕೊಳ್ತಿದ್ದಾರೆ. ಈ ಮೂಲಕ ರೆಬೆಲ್ ಸ್ಟಾರ್ ಎರಡನೇ ತಲೆಮಾರಿನ ಜೊತೆಗೆ ನಟಿಸ್ತಿದ್ದಾರೆ ನಟಿ ತಾರ.
ಜೊತೆಗೆ ಇದೇ ಮೊದಲ ಬಾರಿಗೆ ನಿರ್ದೇಶಕ ದುನಿಯಾ ಸೂರಿಯವರ ಚಿತ್ರದಲ್ಲಿ ತಾರಾ ನಟಿಸುತ್ತಿದ್ದಾರೆ. ಈ ವಿಚಾರವಾಗಿ ತುಂಬಾ ಎಕ್ಸೈಟ್ ಆಗಿರೋ ತಾರಮ್ಮ ಇವತ್ತಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿನಿಮಾದಲ್ಲಿ ತಾರಮ್ಮನ ಪಾತ್ರ ಹೇಗಿರಲಿದೆ ಅನ್ನೋದು ಸರ್ ಪ್ರೈಸ್.