ಹನುಮ ವೇಷಧಾರಿ ಹಾಡಿದ ಹಾಡಿಗೆ ಸುಹಾಸಿನಿ ಮಣಿರತ್ನಂ ಫಿದಾ

ಸಿನಿಮಾ ಕಲಾವಿದರೆ ಹಾಗೆ ಯಾರಾದರೂ ಕಲಾವಿದರನ್ನ ಎಲ್ಲೇ ಕಂಡರೂ ಅವರನ್ನು ಗೌರವಿಸುತ್ತಾರೆ… ಅದೇ ರೀತಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಸುಹಾಸಿನಿ ಹಾಗೂ ಮಣಿರತ್ನಂ ಮನೆ ಮುಂದೆ ಹನುಮ ವೇಷಧಾರಿಯೊಬ್ಬರು ಹಾಡುತ್ತ ಭಿಕ್ಷೆ ಬಿಡಲು ಬಂದಿದ್ದಾರೆ… ಅವರನ್ನು ಕಂಡ ಸುಹಾಸಿನಿ ಅವರ ಹಾಡಿಗೆ ಮನಸೋತಿದ್ದಾರೆ.. ಅದಷ್ಟೇ ಅಲ್ಲದೆ ಅವರು ಹಾಡುವ ಪರಿಯನ್ನ ವಿಡಿಯೋ ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ…

ಆ ಕಲಾವಿದನ ಹೆಸರು ಶಿವ್ ರೆಡ್ಡಿ ಹಾದಿ ಬೀದಿಯಲ್ಲಿ ಹಾಡುತ್ತಾ ಭಿಕ್ಷೆ ಬೇಡುವುದು ಅವನ ಕಾಯಕ… ಮಣಿರತ್ನಂ ಮನೆ ಮುಂದೆ ಬಂದು ಹಾಡುತ್ತಾ ಭಿಕ್ಷೆ ಬೇಡುವುದನ್ನು ಕಂಡ ಸುಹಾಸಿನಿ ಹಾಗೂ ಮಣಿರತ್ನಂ ಕೆಲಕಾಲ ಅವರಿಂದ ಹಾಡುಗಳನ್ನು ಹಾಡಿಸಿ ಸಂತೋಷಪಟ್ಟಿದ್ದಾರೆ… ಅದಷ್ಟೇ ಅಲ್ಲದೆ ಮನವಿಯ ಮೇರೆಗೆ ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿಸಿ ಅವರಿಗೆ ಒಂದಿಷ್ಟು ಸಹಾಯ ಮಾಡಿದ್ದಾರೆ… ಸದ್ಯ ಶಿವ್ ರೆಡ್ಡಿಯ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ…