new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

ದರ್ಶನ್ ಸ್ಥಿತಿ ನೆನೆದು ಕಣ್ಣೀರಿಟ್ಟ ನಟಿ

ದರ್ಶನ್ ಸ್ಥಿತಿ ನೆನೆದು ಕಣ್ಣೀರಿಟ್ಟ ನಟಿ
  • PublishedDecember 11, 2025

ದರ್ಶನ್ ಹಾಗೂ ಅವರ ಫ್ಯಾನ್ಸ್ ಬಗ್ಗೆ ಈ ನಟಿ ಮಾತನಾಡಿದನ್ನು ಕೇಳಿದರೆ ಒಂದು ಕ್ಷಣ ಮೈ ಜುಮ್ಮನ್ನಿಸೋದಂತು ಸತ್ಯ. ಹಾಗಾದ್ರೆ ಆ ನಟಿ ಯಾರು? ಅವ್ರೆನ್ ಹೇಳಿದ್ರು ಅಂತ ಈ ಸ್ಟೋರಿಲಿ ಹೇಳ್ತಿವಿ.

ದರ್ಶನ್ ಅವರ ಡೆವಿಲ್ ಸಿನಿಮಾ ನೋಡಲು ದರ್ಶನ್ ಅಭಿಮಾನಿಗಳು ಭಾರಿ ಪ್ರಮಾಣದಲ್ಲಿ ಬರುತ್ತಿದ್ದಾರೆ. ಜೊತೆಗೆ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಅನೇಕ ಫ್ಯಾನ್ಸ್ ಗಳಿದ್ದರೆ ಇವರ ಪೈಕಿ ನಟಿ ಶಶಿಕಲಾ ಕೂಡ ಒಬ್ಬರು ಅವರು ಮುಂಜಾನೆ ಸಿನಿಮಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆ.

ನಟಿ ಶಶಿಕಲಾ ಕನ್ನಡ ಪಿಚ್ಚರ್ ಜೊತೆಗೆ ಮಾತಾನಾಡುತ್ತಾ ” ಇಲ್ಲಿ ಎಲ್ಲರೂ ಶ್ರೀಮಂತರಲ್ಲ ಆದ್ರೆ ಅವರು ದರ್ಶನ್ ಅವರ ಅಭಿಮಾನಕ್ಕಾಗಿ ಕೆಲವರು ದುಡ್ಡಿಲ್ಲ ಅಂದ್ರು ಸಾಲ ಮಾಡಿನೋ ಅಥವಾ ಮನೇಲಿ ಯಾರ್ ಜೊತೆನಾದ್ರೂ ಕೇಳಿ ಬಂದಿದ್ದಾರೆ “”ಅವರ ಕಷ್ಟದ ಸಮಯದಲ್ಲಿ ಅವರ ಜೊತೆಗೆ ಅಭಿಮಾನಿಗಳು ನಿಂತಿದ್ದಾರೆ” ಎಂದು ದರ್ಶನ್ ಅಭಿಮಾನಿಗಳನ್ನು ಹೊಗಳಿದರು.

ಜೊತೆಗೆ ದರ್ಶನ್ ಅವರ ಬಗ್ಗೆ ಮಾತನಾಡಿದ ಅವರು ” ನಾಲ್ಕು ಗೋಡೆಯ ಮಧ್ಯೆ ಅಭಿಮಾನಿಗಳ ಪ್ರೀತಿ ಇಟ್ಕೊಂಡು ಜೀವಿಸುತ್ತಿದ್ದಾರಲ್ಲ ಅವರಿಗೆ ಆ ನೋವು ಗೊತ್ತು, ಅವರು ಎಷ್ಟು ಕಣ್ಣೀರು ಹಾಕಿರ್ಬೋದು ” ಎಂದು ದರ್ಶನ್ ಅವರ ಪರಿಸ್ಥಿತಿ ಯನ್ನು ನೆನೆದು ಕಣ್ಣೀರಿಟ್ಟರು.

Written By
Kannada Picchar

Leave a Reply

Your email address will not be published. Required fields are marked *