ಕನ್ನಡದ ಮಾಧ್ಯಮ ಮಿತ್ರರಿಗೆ ರಶ್ಮಿಕಾ ಬರೆದ್ರು ಪತ್ರ? ಏನಿದೆ ಪತ್ರದಲ್ಲಿ…

ನಟಿ ರಶ್ಮಿಕ ಮಂದಣ್ಣ ಈಗ ಕೇವಲ ಕರ್ನಾಟಕ ಕ್ರಶ್ ಆಗಿ ಉಳಿದಿಲ್ಲ… ನ್ಯಾಷನಲ್ ಕ್ರಶ್ ಆಗಿ ಟಾಲಿವುಡ್ ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ ….ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಭಿನಯ ಮಾಡುತ್ತಿರುವಂತಹ ರಶ್ಮಿಕಾ ಮಂದಣ್ಣ ಸೂಪರ್ ಸ್ಟಾರ್ ಸಿನಿಮಾಗಳಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ….
ಈ ವರ್ಷವೇ ರಶ್ಮಿಕಾ ರ ಮೂರು ಸಿನಿಮಾಗಳು ಸೆಟ್ಟೇರಿದ್ದು ಈಗಾಗಲೇ ಬಿಸಿ ಶೂಟಿಂಗ್ನಲ್ಲಿ ರಶ್ಮಿಕ ತೊಡಗಿಸಿಕೊಂಡಿದ್ದಾರೆ… ಈ ಮಧ್ಯ ರಶ್ಮಿಕ ಕನ್ನಡ ಸ್ಯಾಂಡಲ್ ವುಡ್ ನ ಮಾಧ್ಯಮ ಮಿತ್ರರನ್ನ ನೆನಪು ಮಾಡಿಕೊಂಡಿದ್ದಾರೆ…..

ಪೊಗರು ಸಿನಿಮಾದ ಚಿತ್ರೀಕರಣದ ನಂತರ ರಶ್ಮಿಕ ಕನ್ನಡ ಮಾಧ್ಯಮದ ಮಿತ್ರರಿಗೆ ಸಿಕ್ಕಿರಲಿಲ್ಲ… ಪೊಗರು ಸಿನಿಮಾ ಆದ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು… ನಂತರ ಬೆಂಗಳೂರಿಗೆ ಬಂದಿ ಹೋದರು ಕೂಡ ಅದು ಸೋಶಿಯಲ್ ಮೀಡಿಯಾ ಮೂಲಕವೇ ಗೊತ್ತಾಗುತ್ತಿತ್ತು….. ಆದರೆ ಈಗ ರಶ್ಮಿಕ ಕನ್ನಡ ಮಾಧ್ಯಮ ಮಿತ್ರರನ್ನ ನೆನಪು ಮಾಡಿಕೊಂಡಿದ್ದಾರೆ ಅದು ಕೂಡ ಒಂದು ಮುದ್ದಾದ ಲೆಟರ್ ಹಾಗೂ ಸಿಹಿ ಸಿಹಿ ಬಾಕ್ಸ್ ಕಳಿಸಿಕೊಡುವ ಮೂಲಕ .ಹಾಗಾದರೆ ರಶ್ಮಿಕ ಬರೆದಿರುವ ಪತ್ರದಲ್ಲಿ ಏನಿದೆ ನೀವೇ ಓದಿ

ಆತ್ಮೀಯ ಸರ್/ಮೇಡಂ.
ಇದು ಒಂದು ಸಣ್ಣ ಸರ್ ಪ್ರೈಸ್… ನಿಮ್ಮ ಮುಖದಲ್ಲಿ ನಗು ತರಿಸಲು ನನ್ನ ಸಣ್ಣ ಪ್ರಯತ್ನ….ಇದು ನನ್ನ ಸ್ವ ಇಚ್ಛೆಯ ನಿರ್ಧಾರ ಹಾಗೆ ನಿಜವಾಗಿಯೂ ಇದು ಯಾವುದಕ್ಕೂ ಸಂಬಂದ ಪಟ್ಟದಲ್ಲ… ನಾನು ನಿಮ್ಮನ್ನು ಭೇಟಿಯಾಗಿ ತುಂಬಾ ದಿನವಾಗಿದೆ ಮತ್ತು ಹಾಗಾಗಿ ನಾನು ನಿಮಗೆ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ… ಇಲ್ಲಿಯವರೆಗೆ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ನಾನು ತೆಗೆದುಕೊಳ್ಳುವ ಪ್ರತಿ ಹೆಜ್ಜೆಯಲ್ಲೂ ನನ್ನನ್ನು ಬೆಂಬಲಿಸುತ್ತಿರುವುದಕ್ಕಾಗಿ..
ಬೇರೆ ಹೇಗೆ ಸಂಪರ್ಕದಲ್ಲಿರಬೇಕೆಂದು ನನಗೆ ತಿಳಿದಿಲ್ಲ ಆದ್ದರಿಂದ ನನ್ನ ಕಡೆಯಿಂದ ಸ್ವಲ್ಪ ಪ್ರೀತಿ ಮತ್ತು ಸಿಹಿ ಇಲ್ಲಿವೆ…
ಧನ್ಯವಾದ
ರಶ್ಮಿಕಾ ಮಂದಣ್ಣ
ಅದೇನೇ ಇರಲಿ ರಶ್ಮಿಕ ನಮ್ಮ ನೆಲದ ಹುಡುಗಿ ಅನ್ನೋ ಪ್ರೀತಿ ಅಂತೂ ಮಾಧ್ಯಮದವರಿಗೆ ಹಾಗೂ ಕನ್ನಡ ಸಿನಿಮಾ ಪ್ರೇಮಿಗಳಿಗೆ ಇದ್ದೇ ಇದೆ ಇನ್ನು ಈ ಲೆಟರ್ ಬಂದಿ ತಲುಪಿದ ನಂತರ ಒಮ್ಮೆ ರಶ್ಮಿಕ ಮತ್ತೆ ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಲಿ ಎನ್ನುವುದು ಎಲ್ಲರ ಆಶಯ