ಒಂದೇ ಫ್ರೇಮ್ ನಲ್ಲಿ ಗೋಲ್ಡನ್ ಗರ್ಲ್ ಹಾಗೂ ಗೋಲ್ಡನ್ ಕ್ವೀನ್
ಸ್ಯಾಂಡಲ್ ವುಡ್ ನ ಗೋಲ್ಡನ್ ಗರ್ಲ್ ಅಮೂಲ್ಯ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ… ಈ ಸಂಭ್ರಮವನ್ನ ತಮ್ಮ ಮತ್ತೊಂದು ಕುಟುಂಬ ಎಂದೇ ಪರಿಗಣಿಸಿರುವ ಸಿನಿಮಾ ಮಂದಿಯ ಜೊತೆ ಆಚರಿಸಿಕೊಂಡಿದ್ದಾರೆ ..ಇತ್ತೀಚೆಗಷ್ಟೇ ಅಮೂಲ್ಯವಾದ ಭೇಟಿ ಕಾರ್ಯಕ್ರಮ ನಡೆದಿದ್ದು ಇಡೀ ಸ್ಯಾಂಡಲ್ ವುಡ್ ಬಳಗ ಅಮೂಲ್ಯ ತಾಯಿಯಾಗುವ ಖುಷಿಯನ್ನ ಸಂಭ್ರಮಿಸಿದೆ ..

ವಿಶೇಷ ಎಂದರೆ ಗೋಲ್ಡನ್ ಗರ್ಲ್ ನೋಡಲು ಸ್ಯಾಂಡಲ್ ವುಡ್ ನ ಗೋಲ್ಡನ್ ಕ್ವೀನ್ ರಮ್ಯಾ ಕೂಡ ಬೇಬಿ ಶವರ್ ಕಾರ್ಯಕ್ರಮದಲ್ಲಿ ಹಾಜರಾಗಿದ್ದಾರೆ …

ರಮ್ಯಾ ಇತ್ತೀಚಿನ ದಿನಗಳಲ್ಲಿ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿತ್ತು ಜೊತೆ ಅಮೂಲ್ಯ ಬೇಬಿ ಶವರ್ ಸಮಾರಂಭವನ್ನು ಅಟೆಂಡ್ ಮಾಡಿರೋದ್ರಿಂದ ಮತ್ತೆ ಸಿನಿಮಾರಂಗದತ್ತ ಬರುವ ಮನಸ್ಸು ಮಾಡ್ತಾರಾ ಅನ್ನೋ ಅನುಮಾನಗಳು ಹೆಚ್ಚಾಗಿದೆ …