ರಕ್ಷಿತ್ ಶೆಟ್ಟಿ ತಂಡ ಸೇರಿದ ಮಯೂರಿ ನಟರಾಜ !

ನಟ ರಕ್ಷಿತ್ ಶೆಟ್ಟಿ ತಂಡವೇ ಆಗಿ ಒಳ್ಳೆ ಕಲಾವಿದರು ಅಂತ ಗೊತ್ತಾದ್ರೆ ಸಾಕು ಅವ್ರನ್ನ ಅವ್ರ ತಂಡಕ್ಕೆ ವೆಕ್ಲಂ ಮಾಡಿಯೇ ಬಿಡ್ತಾರೆ…ಸದ್ಯ ಕನ್ನಡ ಸಿನಿಮಾರಂಗದಲ್ಲಿ ಭರವಸೆಯ ನಟಿ ಎಂದು ಗುರುತಿಸಿಕೊಳ್ತಿರೋ ನಟಿ ಮಯೂರಿ ನಟರಾಜ

ಈಗಾಗಲೇ ಜಮಾಲಿಗುಡ್ಡ ಹಾಗೂ ಹೊಯ್ಸಳ ಸಿನಿಮಾ ಮೂಲಕ ಗುರುತಿಸಿಕೊಂಡಿರೋ ಮಯೂರಿ ಸದ್ಯ ರಕ್ಷಿತ್ ಶೆಟ್ಟಿ ತಂಡ ಸೇರಿಕೊಂಡಿದ್ದಾರೆ….

ಹೌದು… ಮಯೂರಿ ನಟರಾಜ ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ಚಿತ್ರಕ್ಕೆ ಎರಡನೆಯ ನಾಯಕಿಯಾಗಿ ಆಯ್ಕೆಯಾಗಿದ್ದಾರೆ….

ಪರಂವಾ ಸ್ಟುಡಿಯೋಸ್ನಡಿ ರಕ್ಷಿತ್ ಶೆಟ್ಟಿ ನಿರ್ಮಿಸಿ, ಚಂದ್ರಜಿತ್ ಬೆಳ್ಳಿಯಪ್ಪ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರವು ಇದೀಗ ಮುಕ್ತಾಯ ಹಂತ ತಲುಪಿದ್ದು, ಚಿತ್ರತಂಡಕ್ಕೆ ಮಯೂರಿ ನಟರಾಜ್ ಸೇರ್ಪಡೆಯಾಗಿದ್ದಾರೆ..‘ಇಬ್ಬನಿ ತಬ್ಬಿದ ಇಳೆಯಲಿ’ ಒಂದು ಕಾವ್ಯಾತ್ಮಕ ಪ್ರೇಮಕಥೆಯಾಗಿದ್ದು, ಮೂರು ವಿಭಿನ್ನ ಕಾಲಘಟ್ಟದಲ್ಲಿ ನಡೆಯುವ ಚಿತ್ರವಾಗಿದೆ. ವಿಹಾನ್ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಮತ್ತು ಶ್ರೀವತ್ಸನ್ ಸೆಲ್ವರಾಜನ್ ಅವರ ಛಾಯಾಗ್ರಹಣವಿದೆ.

ಮಯೂರಿ ನಟರಾಜ ನೋಡೋದಕ್ಕೆ ಅಟ್ರ್ಯಾಕ್ಟಿವ್ ಆಗಿರೋದರ ಒಟ್ಟಿಗೆ ವಾಯ್ಸ್ ಕೂಡ ತುಂಬಾ ಚೆನ್ನಾಗಿದೆ ..ಹೊಸ ಕಥೆಗೆ ತಕ್ಕನಾದ ನಟಿ ಅನ್ನೋ ಅಭಿಪ್ರಾಯ ಇಂಡಸ್ಟ್ರಿಯಿಂದ ಕೇಳಿ ಬರ್ತಿದೆ…..