ಪಿಚ್ಚರ್ UPDATE

ಮದುವೆಗೂ ಮುನ್ನ ಟೆಂಪಲ್‌ ರನ್‌ ಶುರು ಮಾಡಿದ ವಸಿಷ್ಠ-ಹರಿಪ್ರಿಯಾ

ಮದುವೆಗೂ ಮುನ್ನ ಟೆಂಪಲ್‌ ರನ್‌ ಶುರು ಮಾಡಿದ ವಸಿಷ್ಠ-ಹರಿಪ್ರಿಯಾ
  • PublishedDecember 9, 2022

ಇತ್ತೀಚೆಗಷ್ಟೇ ಸೈಲೆಂಟ್‌ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಸ್ಯಾಂಡಲ್‌ವುಡ್ ಕ್ಯೂಟ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಮದುವೆಗೂ ಮುನ್ನ ಟೆಂಪಲ್‌ ರನ್‌ ಶುರು ಮಾಡಿದ್ದಾರೆ…ಇಂದು ಬೆಳಗ್ಗೆಯಷ್ಟೇ ಸೋಷಿಯಲ್‌ ಮಿಡಿಯಾ ಮೂಲಕ ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡ ವಿಚಾರವನ್ನ ಹೇಳಿಕೊಂಡ ಹರಿಪ್ರಿಯಾ ಇಂದೇ ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ….

ವಸಿಷ್ಠ ಜೊತೆಯಾಗಿ ಉಡುಪಿ ಮಠಕ್ಕೆ ಬೇಟಿಕೊಟ್ಟಿದ್ದು ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದಿದ್ದಾರೆ, ನಂತರ ವಿಶೇಷ ಪೂಜೆ ಸಲ್ಲಿಸಿ. ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವಿಸಲಾಯಿತು….

Written By
Kannadapichhar