ಮುಂಬೈ ಟ್ರೈನ್ ನಲ್ಲಿ ನಟಿ ಭಾವನಾ ಬ್ರೇಸ್ಲೇಟ್-ಚೈನ್ ಕಳ್ಳತನ

ಇಂತಿ ನಿನ್ನ ಪ್ರೀತಿಯಾ ಖ್ಯಾತಿಯ ನಟಿ ಭಾವನಾ ಸುಮಾರು ವರ್ಷಗಳ ನಂತ್ರ ಮತ್ತೆ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಟ್ಟಿದ್ದಾರೆ…ಡಾಲಿ ಅಭಿನಯದ ಜಮಾಲಿಗುಡ್ಡ ಚಿತ್ರದಲ್ಲಿ ಅಭಿನಯ ಮಾಡಿದ್ದು ಭಾವನಾ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ…ಈಗಾಗಲೇ ಚಿತ್ರರಂಗದಲ್ಲಿ ೨೦ ವರ್ಷ ಜರ್ನಿ ಮುಗಿಸಿರೋ ಭಾವನಾ ಕೇವಲ ಕನ್ನಡ ಮಾತ್ರವಲ್ಲದೆ ಐದು ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಬಂದಿದ್ದಾರೆ…
ಬಾಲಿವುಡ್ ಸಿನಿಮಾದಲ್ಲಿ ಅಭಿನಯ ಮಾಡಲು ಮುಂಬೈಗೆ ತೆರೆಳಿದ ಸಂದರ್ಭವನ್ನ ಕನ್ನಡ ಪಿಚ್ಚರ್ ಬಳಿ ಭಾವನಾ ಮಾತನಾಡಿದ್ದಾರೆ…ಇದೇ ಸಂದರ್ಭದಲ್ಲಿ ಮುಂಬೈ ಟ್ರೈನ್ ನಲ್ಲಿ ತಮ್ಮ ಚಿನ್ನದ ಆಭರಣಗಳನ್ನ ಕಳೆದುಕೊಂಡ ಕಥೆಯನ್ನ ಹೇಳಿಕೊಂಡಿದ್ದಾರೆ….