“ಕ್ಯೂ” ಸಿನಿಮಾಗೆ ಸ್ಟಾರ್ ನಟಿಯ ಮಗಳು ಹೀರೋಯಿನ್

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟರ ಸಾಲಿನಲ್ಲಿ ನಿಲ್ಲುವ ಕಲಾವಿದ ನಿರಂಜನ್ ಸುಧೀಂದ್ರ… ಉಪೇಂದ್ರ ಅವರ ಅಣ್ಣನ ಮಗನಾಗಿರುವ ನಿರಂಜನ್ ಸುಧೀಂದ್ರ ಅವರ ಕೈಲಿ ಈಗಾಗ್ಲೇ ಮೂರ್ನಾಕ್ಕು ಸಿನಿಮಾಗಳಿವೆ.. ಸದ್ಯ ಕನ್ನಡದ ಪ್ರಖ್ಯಾತ ನಿರ್ದೇಶಕರಾದ ನಾಗಶೇಖರ್ ಅವರ ಸಿನಿಮಾದಲ್ಲಿ ನಾಯಕನಾಗಿರುವ ನಿರಂಜನ್ ಅವರ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ..

ನಟ ನಾಗಶೇಖರ್ ಆಕ್ಷನ್ ಕಟ್ ಹೇಳುತ್ತಿರುವ ಕ್ಯೂ ಸಿನಿಮಾಗೆ ಸ್ಟಾರ್ ನಟಿಯ ಮಗಳನ್ನ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ… ಹೌದು ಮೈನೇ ಪ್ಯಾರ್ ಕಿಯಾ ಸಿನಿಮಾದ ಮೂಲಕ ಪ್ರೇಕ್ಷಕರ ಪ್ರೀತಿಯನ್ನ ಪಡೆದಿದ್ದ ನಟಿ ಭಾಗ್ಯಶ್ರೀ ಅವರ ಮಗಳು ಕ್ಯೂ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ…

ಕೇವಲ ಬಾಲಿವುಡ್ ಸಿನಿಮಾ ಮಾತ್ರವಲ್ಲದೆ ಕನ್ನಡ ಸಿನಿಮಾದಲ್ಲಿ ಕೂಡ ಅಭಿನಯ ಮಾಡಿದ್ದರು ಭಾಗ್ಯಶ್ರೀ… ಅಮ್ಮಾವ್ರ ಗಂಡ ಸಿನಿಮಾದ ಮೂಲಕ ಶಿವಣ್ಣನ ಜೊತೆಯಾಗಿದ್ದ ಭಾಗ್ಯಶ್ರೀ ಅವರ ಮಗಳು ಈಗ ತಾಯಿಯಂತೆ ಕನ್ನಡ ಪ್ರೇಕ್ಷಕರ ಗಮನ ಸೆಳೆಯಲು ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಿದ್ದಾರೆ…

ಭಾಗ್ಯಶ್ರೀ ಅವರ ಪುತ್ರಿಯ ಆವಂತಿಕಾ ಕ್ಯೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ..ಈಗಾಗಲೇ ಆವಂತಿಕಾ ಮಿಥ್ಯ ಎಂಬ ವೆಬ್ ಸೀರಿಸ್ ನಲ್ಲಿ ಅಭಿನಯ ಮಾಡಿದ್ದು, ತೆಲುಗಿನಲ್ಲಿಯೂ ಕೂಡ ಒಂದು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ ..ತಾಯಿಯಂತೆಯೇ ಸುಂದರವಾಗಿರುವ ಆವಂತಿಕಾ ಅಭಿನಯದ ಮೂಲಕ ಕನ್ನಡ ಪ್ರೇಕ್ಷಕರ ಗಮನ ಎಷ್ಟರಮಟ್ಟಿಗೆ ಸೆಳೆಯುತ್ತಾರೆ ಎಂಬುದನ್ನ ಕಾದುನೋಡಬೇಕಿದೆ…