ಕಾಟೇರ ಸಿನಿಮಾಗೆ ಎರಡರ ಸಂಭ್ರಮ, ಪೋಸ್ಟ್ ಹಂಚಿಕೊಂಡ ನಟಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾವು 2023 ರ ಡಿಸೆಂಬರ್ 29 ರಂದು ರಿಲೀಸ್ ಆಗಿತ್ತು. ಈ ಚಿತ್ರದ ನಾಯಕಿಯಾಗಿ ಸ್ಯಾಂಡಲ್ ವುಡ್ ನ ಎವರ್ಗ್ರೀನ್ ನಾಯಕಿ ಮಾಲಾಶ್ರೀ ಅವರ ಮಗಳು ಆರಾಧನ ಅಭಿನಯಿಸಿದ್ದರು. ಇದೀಗ ಚಿತ್ರದ ಎರಡನೇ ವರ್ಷದ ಮಹೋತ್ಸವಕ್ಕೆ ನಟಿ ಆರಾಧನ ತೆರೆ ಮರೆಯ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬ್ಲಾಕ್ ಬಸ್ಟರ್ ಡೈರೆಕ್ಟರ್ ತರುಣ್ ಸುಧೀರ್ ನಿರ್ದೇಶನದಡಿಯಲ್ಲಿ ಮೂಡಿ ಬಂದಿರುವ ಚಿತ್ರ ಇದ್ದಾಗಿದ್ದು 2023ರ ಬ್ಲಾಕ್ ಬಸ್ಟರ್ ಚಿತ್ರವಾಗಿತ್ತು. ಈ 2ನೇ ವರ್ಷದ ಸಂಭ್ರಮದಲ್ಲಿ ಆರಾಧನ ಅವರು “ಎರಡು ವರ್ಷಗಳ ಹಿಂದೆ, ‘ಕಾಟೇರ’ ಎಂಬ ಹೆಸರಿನಲ್ಲಿ ಒಂದು ಕನಸು ಮೊಳಕೆಯೊಡೆಯಿತು. ಇಂದಿಗೂ ಅದೇ ವಿಸ್ಮಯ, ಇಂದಿಗೂ ಅದೇ ಕೃತಜ್ಞತೆ ಇದೆ.” ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.