ತೆಲುಗು ಅಲ್ಲ.. ಮಲಯಾಳಂ ಅಲ್ಲ.. ಕನ್ನಡ ನಿರ್ದೇಶಕನ ಜೊತೆ ರಾಕಿಂಗ್ ಸ್ಟಾರ್ ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಕಳೆದ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ತೊಡಗಿಸಿಕೊಂಡಿಲ್ಲ… ಯಶ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ….ಬರ್ತಡೇಗೆ ಸುದ್ದಿ ಕೊಡ್ತಾರೆ ಅಂತ ಕಾದಿದ್ದು ವ್ಯರ್ಥವಾಯ್ತು… ಆದರೆ ಯಶ್ ಮಾತ್ರ ಯಾವ ಸಿನಿಮಾ ಮಾಡುತ್ತಾರೆ… ಯಾರ ಜೊತೆ ಎನ್ನುವ ಸುದ್ದಿ ಇನ್ನೂ ಕೂಡ ಕನ್ಫರ್ಮ್ ಆಗಿಲ್ಲ…. ಈ ಹಿಂದೆ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಅನ್ನು ಸುದ್ದಿ ಜೋರಾಗಿತ್ತು… ಕೆಲವು ದಿನಗಳ ನಂತರ ನರ್ತನ ಚಿತ್ರದಿಂದ ಯಶ್ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಕನ್ಫರ್ಮ್ ಆಯ್ತು… ಅದಾದ ಮೇಲೆ ಟಾಲಿವುಡ್, ಬಾಲಿವುಡ್,ಗಳಿಂದಲೂ ಯಶ್ ಅವರಿಗೆ ಸಿನಿಮಾ ಆಫರ್ ಗಳು ಬಂತು… ಆದರೆ ಯಶ್ ಮಾತ್ರ ಯಾವುದೇ ಸಿನಿಮಾವನ್ನ ಒಪ್ಪಿಕೊಂಡಿರಲಿಲ್ಲ…ಆದರೆ ಈಗ ಯಶ್ ಸಿನಿಮಾ ಬಗ್ಗೆ ಹೊಸ ಸುದ್ದಿ ಕೇಳಿ ಬರ್ತಿದೆ…ಅದೇನಪ್ಪ ಅಂದ್ರೆ …ಯಶ್ ಮತ್ತೆ ಕನ್ನಡ ನಿರ್ದೇಶಕನ ಜೊತೆ ಕೆಲಸ ಮಾಡುತ್ತಾರಂತೆ…

ಹೌದು ಇತ್ತೀಚಿಗಷ್ಟೇ ಕೆಜಿಎಫ್ ಚಾಪ್ಟರ್ 2 ಸಿನಿಮಾ ಬಿಡುಗಡೆಯಾಗಿ ಒಂದು ವರ್ಷವಾಗಿದೆ… ಇದೇ ಸಂಭ್ರಮದಲ್ಲಿ ಹೊಂಬಾಳೆ ಸಂಸ್ಥೆ ಟೀಸರ್ ಒಂದನ್ನು ಬಿಡುಗಡೆ ಮಾಡಿದೆ… ಈ ಟೀಸರ್ ನಲ್ಲಿ ಕೆಜಿಎಫ್ 3 ಕನ್ಫರ್ಮ್ ಆಗಿ ಬಂದೇ ಬರುತ್ತೆ ಅನ್ನೋ ಸುದ್ದಿಯನ್ನು ಕೂಡ ಕೊಟ್ಟಿದ್ದಾರೆ….. ಇನ್ನು ಇದೇ ಸಂದರ್ಭದಲ್ಲಿ ಯಶ್ ಶ್ರೀಲಂಕಾಗೆ ಭೇಟಿ ಕೊಟ್ಟಿದ್ದಾರೆ…ಅಲ್ಲಿಯ ಟೂರಿಸಂ ಹಾಗೂ ರೇರ್ ಪ್ಲೇಸ್ ಗಳನ್ನ ನೋಡಿಕೊಂಡು ಬಂದಿದ್ದಾರಂತೆ…ಅಲ್ಲೇ ಚಿತ್ರದ ಕೆಲವು ಭಾಗಗಳಲ್ಲಿ ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ಇದೆ…ಹಾಗಾದ್ರೆ ಅದು ಯಾವ ಸಿನಿಮಾಗೆ ಅಂದರೆ ಕೆಜಿಎಫ್ ಪಾರ್ಟ್ 3… ಹೌದು ಯಶ್ ಅವರು ಸದ್ಯ ಯಾವುದೇ ಸಿನಿಮಾವನ್ನ ಒಪ್ಪಿಕೊಂಡಿಲ್ಲ ಅದೆಷ್ಟೇ ಅಲ್ಲದೆ ಅವರ ಲುಕ್ ಕೂಡ ಬದಲಾಯಿಸಿಕೊಂಡಿಲ್ಲ… ಹಾಗಾಗಿ ಸದ್ಯ ಇರುವ ಮಾಹಿತಿಯ ಪ್ರಕಾರ ಯಶ್ ಮತ್ತೆ ಕೆಜಿಎಫ್ 3 ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರಂತೆ..ಪ್ರಶಾಂತ್ ನೀಲ್ ಕೂಡ ಸಲಾರ್ ಸಿನಿಮಾ ಮುಗಿಸಿ ಮತ್ತೆ ಯಶ್ ಜೊತೆ ಕೈ ಜೋಡಿಸುತ್ತಾರಂತೆ….
