“ಉತ್ತರಕಾಂಡ” ಕ್ಕೆ ಶಿವಣ್ಣ ಎಂಟ್ರಿ ..!

ಡಾಲಿ ಧನಂಜಯ ಅಭಿನಯದ ಉತ್ತರಕಾಂಡ ಸಿನಿಮಾ ಶೂಟಿಂಗ್ ಸದ್ಯದಲ್ಲೇ ಶುರುವಾಗಲಿದೆ…ಈಗಾಗಲೇ ಡಾಲಿ ಜೊತೆ ರಮ್ಯಾ ಸಿನಿಮಾದಲ್ಲಿ ಆಕ್ಟ್ ಮಾಡ್ತಾರೆ ಅನ್ನೋ ಅನ್ನೋ.ವಿಚಾರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದೆ ಆದ್ರೆ ಈಗ ಮತ್ತೊಂದು ಖುಷಿ ವಿಚಾರವನ್ನ ನಟ ಶಿವರಾಜ್ ಕುಮಾರ್ ಹಂಚಿಕೊಂಡಿದ್ದಾರೆ…

ಉತ್ತರಕಾಂಡ ಸಿನಿಮಾದಲ್ಲಿ ಕೇವಲ ಡಾಲಿ ಮಾತ್ರವಲ್ಲ ನಟ ಶಿವರಾಜ್ ಕುಮಾರ್ ಕೂಡ ಅಭಿನಯ ಮಾಡುತ್ತಿದ್ದಾರಂತೆ…ಈ ವಿಚಾರವನ್ನ ಡಾಲಿ ಹಾಗೂ ಶಿವಣ್ಣ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ…

ಈ ಮೂಲಕ ಮತ್ತೆ ಡಾಲಿ ಹಾಗೂ ಶಿವಣ್ಣ ಕಾಂಭಿನೇಷನ್ ಸಿನಿಮಾ ಬರ್ತಿದ್ದು ಅದ್ರ ಜೊತೆಗೆ ರಮ್ಯಾ ಹಾಗೂ ಶಿವಣ್ಣ ಜೋಡಿಯನ್ನ ಮತ್ತೆ ತೆರೆ ಮೇಲೆ ನೋಡೋ ಅವಕಾಶ ಸಿಕ್ಕಂತಾಗುತ್ತೆ…ಈ ಸಿನಿಮಾವನ್ನ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದು..ಕೆಆರ್ಜಿ ಟೀಂ ಪ್ರೋಡ್ಯೂಸ್ ಮಾಡ್ತಿದೆ..