new updates News news updates ಪಿಚ್ಚರ್ EXCLUSIVE ಪಿಚ್ಚರ್ stories

ದೊನ್ನೆ ಬಿರಿಯಾನಿ ಬ್ಯಾಟಿಂಗ್ ಮಾಡಿದ ನಟ ಧನಂಜಯ್, ನೆಟ್ಟಿಗರು ಗರಂ

ದೊನ್ನೆ ಬಿರಿಯಾನಿ ಬ್ಯಾಟಿಂಗ್ ಮಾಡಿದ ನಟ ಧನಂಜಯ್, ನೆಟ್ಟಿಗರು ಗರಂ
  • PublishedJanuary 25, 2026

ನಟ ಡಾಲಿ ಧನಂಜಯ್ ಮಾಂಸಾಹಾರ ಸೇವಿಸಿದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.. ಕೆಂಗೇರಿ ಉಪನಗರದ ಅಪ್ಪುಸ್ ಬಿರಿಯಾನಿ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ನಟ ಧನಂಜಯ್ ಅತಿಥಿಯಾಗಿ ಹೋಗಿದ್ದರು. ಈ ವೇಳೆ ಅಲ್ಲಿ ಬಿರಿಯಾನಿ, ಚಿಕನ್- ಮಟನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.. ಲಿಂಗಾಯತ ಸಮುದಾಯದವರಾಗಿ ಧನಂಜಯ್ ಮಾಂಸಾಹಾರ ಸೇವಿಸುತ್ತಾರಾ ಅಂತ ಕೆಲವರು ಟ್ರೋಲ್ ಮಾಡಲು ಆರಂಭಿಸಿದ್ದಾರೆ.

ನಾನೊಬ್ಬ ಲಿಂಗಾಯತ ಎಂದು ಹೇಳಿಕೊಳ್ಳುವ ಬಸವಣ್ಣನವರ ವಚನಗಳನ್ನು ಆಗಾಗ ವೇದಿಕೆಗಳಲ್ಲಿ ಹೇಳುತ್ತಾ ಓಡಾಡುವ ಧನಂಜಯ್ ನಾನ್ ವೆಜ್ ತಿಂತಾರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಊಟ ಅವರಿಷ್ಟ. ಜನ ತಮಗೆ ಇಷ್ಟ ಇರುವ ಆಹಾರ ತಿನ್ತಾರೆ.. ಇದರಲ್ಲಿ ಜಾತಿಯನ್ನು ಎಳೆದು ತರಬೇಡಿ ಎಂದು ಸಾಕಷ್ಟು ಜನ ಧನಂಜಯ್ ಬೆಂಬಲಕ್ಕೆ ನಿಂತಿದ್ದಾರೆ. ಅಂದಹಾಗೆ ಧನಂಜಯ್ ಮಾಂಸಾಹಾರ ಸೇವಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಸೇವಿಸಿದ್ದಾರಂತೆ ಆದರೆ ಈಗ ಈ ವಿಡಿಯೋ ವೈರಲ್ ಆಗಿ ಚರ್ಚೆ ಹುಟ್ಟುಹಾಕಿದೆ..

Written By
Kannada Picchar

Leave a Reply

Your email address will not be published. Required fields are marked *